ಮಕ್ಕಳ ಮಾರಾಟ ಜಾಲ ಭೇದಿಸುವಲ್ಲಿ ಯಶಸ್ವಿಯಾದ ಥಾಣೆ ಪೊಲೀಸರು

ಮುಂಬೈ ಮೂಲದ ವ್ಯಕ್ತಿಯೊಬ್ಬರಿಗೆ 1.35ಲಕ್ಷಕ್ಕೆ ಮಗು ಮಾರಾಟ ಮಾಡಲು ಮುಂದಾಗಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಅಲ್ಲದೆ, ಈ ಹಿಂದೆ ಇಬ್ಬರು ಮಕ್ಕಳನ್ನು ಮಾರಾಟ ಮಾಡಿದ್ದೆವು ಎಂದು ಹೇಳಿದಾಗ ಇನ್ನೂ ವಿಚಾರಣೆಗೊಳಪಡಿಸಿದ್ದು, ಈ ಜಾಲದ ಹಿಂದೆ ಮತ್ತಷ್ಟು ಆರೋಪಿಗಳು ಇರುವುದು ಖಚಿತಪಟ್ಟಿದೆ.
ಮಕ್ಕಳ ಮಾರಾಟ ಜಾಲ ಭೇದಿಸಿದ ಥಾಣೆ ಪೊಲೀಸರು ಆರು ಮಹಿಳೆಯರು ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ. ನಗರದ ಮಲ್ನಾಡು ಚೆಕ್‍ನಾಕನ ಬಳಿ ಇರುವ ಹೊಟೇಲ್ ಸಮೀಪ ಅನುಮಾನಾಸ್ಪದವಾಗಿ ಮಹಿಳೆ ಹಾಗೂ ವ್ಯಕ್ತಿಯೊಬ್ಬರು ಒಂದು ತಿಂಗಳ ಮಗು ಎತ್ತಿಕೊಂಡು ಓಡಾಡುತ್ತಿರುವುದನ್ನು ಗಮನಿಸಿದ ಥಾಣೆ ಪೊಲೀಸರ ಅಪರಾಧ ವಿಭಾಗ - ಒಂದು ತಂಡವು ಅವರನ್ನು ವಿಚಾರಣೆ ನಡೆಸಿದಾಗ ಸರಿಯಾದ ಉತ್ತರ ನೀಡದೆ ಸಿಕ್ಕಿಬಿದ್ದಿದ್ದಾರೆ, ಈ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಥಾಣೆಯ ಮುಮ್ರಾ ರೈಲ್ವೆ ನಿಲ್ದಾಣದಲ್ಲಿ ಇತರೆ ಆರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ನಿತಿನ್ ತ್ಯಾಕ್ರೆ ಹೇಳಿದರು.
Comments