ಅತ್ಯಾಚಾರಿ ಬಾಬಾ ಇದೀಗ ಹೈಕೋರ್ಟ್ ಮೊರೆ

ಸಿ.ಬಿ.ಐ. ಕೋರ್ಟ್ ನೀಡಿರುವ ಆದೇಶವನ್ನು ರಾಮ್ ರಹೀಂ ಪಂಜಾಬ್ -ಹರಿಯಾಣ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದಾನೆ. ತನ್ನ ವಕೀಲರ ಮೂಲಕ ಹೈಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿರುವ ಆತ, ಸಿ.ಬಿ.ಐ ಕೋರ್ಟ್ ನೀಡಿರುವ ತೀರ್ಪನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿದ್ದಾನೆ.
ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ರಾಮ್ ರಹೀಂಗೆ 2 ಪ್ರಕರಣಗಳಲ್ಲಿ 20 ವರ್ಷ ಜೈಲು ಶಿಕ್ಷೆ ವಿಧಿಸಿ, ಪಂಚಕುಲಾ ಸಿ.ಬಿ.ಐ. ವಿಶೇಷ ನ್ಯಾಯಾಲಯ ಆಗಸ್ಟ್ 25 ರಂದು ಆದೇಶಿಸಿದೆ. ಈ ನಡುವೆ ಬಾಬಾನ ಆಶ್ರಮದಲ್ಲಿ ಶೋಧ ಕಾರ್ಯ ಕೈಗೊಂಡಿದ್ದ ಸಂದರ್ಭದಲ್ಲಿ ಹಲವು ಬೆಚ್ಚಿ ಬೀಳಿಸುವ ಸಂಗತಿ ಬಯಲಾಗಿವೆ. ಇನ್ನು ಪತ್ರಕರ್ತ ರಾಮ್ ಚಂಧರ್ ಛತ್ರಪತಿ ಹಾಗೂ ಡೇರಾದ ಮಾಜಿ ಮ್ಯಾನೇಜರ್ ರಂಜಿತ್ ಸಿಂಗ್ ಅವರ ಹತ್ಯೆ ಆರೋಪ ಕೂಡ ಬಾಬಾನ ಮೇಲಿದ್ದು, ವಿಚಾರಣೆ ನಡೆದಿದೆ.
Comments