ವಿಶ್ವದ ಅತೀ ತೂಕವುಳ್ಳ ಮಹಿಳೆ ಇಮಾನ್ ಅಹ್ಮದ್ ನಿಧನ

ಅಬುದಾಬಿ : ಜಗತ್ತಿನ ಅತೀ ಹೆಚ್ಚು ತೂಕದ ಮಹಿಳೆ ಎಂದೇ ಹೆಸರಾಗಿದ್ದ ಈಜಿಪ್ಟ್ನ ಇಮಾನ್ ಅಹ್ಮದ್, ಮೃತಪಟ್ಟಿದ್ದಾರೆ. ಯಾವುದೇ ಶಸ್ತ್ರ ಚಿಕಿತ್ಸೆ, ಆಧುನಿಕ ವಿಜ್ಞಾನ, ಆಕೆಯ ತೂಕವನ್ನು ಕಡಿಮೆ ಮಾಡಲು ಯಶಸ್ವಿಯಾಗಲಿಲ್ಲ.
ಬರೋಬ್ಬರಿ 500 ಕೆಜಿ ತೂಗುತ್ತಿದ್ದ ಇಮಾನ್ ಅಹ್ಮದ್ ದೇಹದ ತೂಕ ಕಡಿಮೆ ಮಾಡಲು ಜಗತ್ತಿನ ಯಾವ ವೈದ್ಯರೂ ಒಪ್ಪಿರಲಿಲ್ಲ. ಆ ಸವಾಲನ್ನು ಮುಂಬೈನ ವೈದ್ಯರು ಸ್ವೀಕರಿಸಿದ್ದರು. ಸುಷ್ಮಾ ಸ್ವರಾಜ್ ಸ್ಪಂದನೆಯಿಂದ ಆಕೆಯನ್ನು ಈಜಿಪ್ಟ್ನಿಂದ ಕರೆತರಲಾಗಿತ್ತು. ಆಕೆಯನ್ನು ತರಲಿಕ್ಕೆಂದೇ ವಿಶೇಷ ವಿಮಾನ, ಕಂಟೇನರ್ಗಳನ್ನು ವ್ಯವಸ್ಥೆ ಮಾಡಲಾಗಿತ್ತು.
ಮುಂಬೈ ವೈದ್ಯರು ಆಕೆಯ ದೇಹದ ತೂಕವನ್ನು 330 ಕೆಜಿಯಷ್ಟು ಕಡಿಮೆ ಮಾಡಿದ್ದರು. ಆದರೆ, ಆ ವೇಳೆ ವೈದ್ಯರ ಚಿಕಿತ್ಸೆಗೆ ಆಕೆಯ ಕುಟುಂಬ ಸದಸ್ಯರು ಸ್ಪಂದಿಸಲಿಲ್ಲ. ಕೊನೆಗೆ ವಿಶೇಷ ಚಿಕಿತ್ಸೆಗಾಗಿ ಇಮಾನ್, ಅಬುದಾಬಿಯ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಇಮಾನ್ ಮೃತಪಟ್ಟಿದ್ದಾರೆ. ಅತಿಯಾದ ದೇಹತೂಕದಿಂದಾಗಿ, ಹೃದಯದ ತೊಂದರೆ ಮತ್ತು ಕಿಡ್ನಿ ವೈಫಲ್ಯಗಳಿಂದ ಬಳಲುತ್ತಿದ್ದ ಇಮಾನ್, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
Comments