ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಇಬ್ಬರ ಸೆರೆ ?

ಸಿ.ಸಿ. ಕ್ಯಾಮರಾದಲ್ಲಿಯೂ ಇವರಿಬ್ಬರು ಓಡಾಟ ನಡೆಸಿದ್ದು ದಾಖಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗಿದೆ. ಗೌರಿ ಲಂಕೇಶ್ ಹತ್ಯೆಯಾದ ದಿನದಿಂದಲೂ ಎಸ್.ಐ.ಟಿ. ಸತತ ಕಾರ್ಯಾಚರಣೆ ನಡೆಸಿದ್ದು, ಮಹತ್ವದ ಸುಳಿವು ಸಿಕ್ಕಿದೆ ಎಂದು ಹೇಳಲಾಗಿದೆ.
ಉಳಿದ ಇಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಲಾಗಿದೆ. ಇವರಿಬ್ಬರು ಗೌರಿ ಲಂಕೇಶ್ ಮನೆಯ ಸುತ್ತ ಓಡಾಡಿರುವುದು ಅವರ ಮೊಬೈಲ್ ಲೋಕೇಷನ್ ಡಿಟೇಲ್ ನಲ್ಲಿ ಗೊತ್ತಾಗಿದೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಎಸ್.ಐ.ಟಿ., ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ ಎನ್ನಲಾಗಿದೆ. ಸಿ.ಸಿ. ಟಿ.ವಿ. ಕ್ಯಾಮೆರಾಗಳ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದ ಎಸ್.ಐ.ಟಿ., ಗೌರಿ ಲಂಕೇಶ್ ಮನೆಯ ಸುತ್ತ ಕೊಲೆಯ ದಿನ ಮತ್ತು ಹಿಂದಿನ ದಿನ ಇವರಿಬ್ಬರು ಓಡಾಟ ನಡೆಸಿದ್ದನ್ನು ಗಮನಿಸಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಮೊದಲಿಗೆ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಅವರಲ್ಲಿ ಒಬ್ಬ ತನ್ನ ಪ್ರಿಯತಮೆಯನ್ನು ಕಾಣಲು ಬಂದಿದ್ದ ಎಂಬುದು ಗೊತ್ತಾಗಿ ಬಿಟ್ಟು ಕಳಿಸಲಾಗಿದೆ.
Comments