ಮಿಸ್ ಯು ಮೆಸೇಜ್ ನಿಂದ ಬಯಲಾಯಿತು ಮದುಮಗನ ಕರ್ಮಕಾಂಡ

ಪ್ರೇಯಸಿಗೆ ಮೋಸ ಮಾಡಿ ಮತ್ತೊಬ್ಬಳೊಂದಿಗೆ ಮದುವೆ ಆಗೋಕೆ ರೆಡಿಯಾದ ಮದುಮಗ. ಆದ್ರೆ ಹಸೆಮಣೆ ಏರೊ ಮುನ್ನ ಮುರಿದುಬಿದ್ದ ಮದುವೆ. ಈ ಘಟನೆಯೊಂದು ನಗರದಲ್ಲಿ ನಡೆದಿದೆ. ಮದುವೆಗೆಂದು ಬಂದಿದ್ದವರು ನಿರಾಸೆಯಿಂದ ವಾಪಸ್ ತೆರಳಿದ್ದಾರೆ. ಸದ್ಯ ಯುವತಿ ತನಗಾದ ಮೋಸಕ್ಕೆ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ .
ನೆಲಮಂಗಲ ನಿವಾಸಿ ಅರ್ಜುನ್ ಎಂಬಾತ ಮೈಸೂರಿನ ಯುವತಿಯೊಬ್ಬಳನ್ನು ಕಳೆದ 11 ವರ್ಷದಿಂದ ಪ್ರೀತಿಸುತ್ತಿದ್ದ. ಮದುವೆಯಾಗುವುದಾಗಿ ನಂಬಿಸಿ ಇದೀಗ ದಿಢೀರ್ ಅಂತ ಮತ್ತೊಬ್ಬಾಕೆಯನ್ನು ವರಿಸಲು ರೆಡಿಯಾಗಿದ್ದ. ಅಂತೆಯೇ ನೆಲಮಂಗಲದ ಅರಿಶಿನಕುಂಟೆ ಗ್ರಾಮದ ಸಪ್ತಗಿರಿ ಕಲ್ಯಾಣ ಮಂಟಪದಲ್ಲಿ ಮದುವೆಗೆ ಭರ್ಜರಿ ತಯಾರಿನೂ ನಡೆದಿತ್ತು.
ಈ ಮಧ್ಯೆ ವರ ಅರ್ಜುನ್ ಗುರುವಾರ ರಾತ್ರಿ `ಮಿಸ್ ಯೂ’ ಅಂತ ವಾಟ್ಸಾಪ್ ಮೂಲಕ ತನ್ನ ಪ್ರಿಯತಮೆಗೆ ಮೆಸೇಜ್ ಹಾಕಿದ್ದ. ಇದರಿಂದ ಆತಂಕಗೊಂಡ ಯುವತಿ ಮೈಸೂರಿನಿಂದ ನೇರವಾಗಿ ನೆಲಮಂಗಲಕ್ಕೆ ಬಂದಿದ್ದಾಳೆ. ಈ ವೇಳೆ ಆಕೆಗೆ ಲವ್ವರ್ ಬೇರೆ ಮದುವೆಯಾಗುತ್ತಿರೋ ವಿಚಾರ ತಿಳಿಯಿತು. ಬಳಿಕ ಅಲ್ಲಿಂದ ಯುವತಿ ಮುಂಜಾನೆ 6.30ರ ಸಮಯಕ್ಕೆ ಮದುವೆ ಮಂಟಪಕ್ಕೆ ಬಂದು ರಂಪಾಟ ನಡೆಸಿದ್ದಾಳೆ. ಈ ವೇಳೆ ನೆರೆದವರು ಯುವತಿಯ ಮನವೊಲಿಸಲು ಯತ್ನಿಸಿದ್ದಾರೆ.
ಯುವತಿಯ ಗಲಾಟೆಯಿಂದ ವಧುವಿನ ಕಡೆಯವರು ಆತಂಕಗೊಂಡಿದ್ದಾರೆ. ಅಲ್ಲದೇ ಮದುವೆಗೆಂದು ಬಂದಿದ್ದವರು ನಿರಾಸೆಯಿಂದ ವಾಪಸ್ ತೆರಳಿದ್ದಾರೆ. ಸದ್ಯ ಯುವತಿ ತನಗಾದ ಮೋಸಕ್ಕೆ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
Comments