ಪೂಜಾ ಗಾಂಧಿ ತಂದೆ ಮೇಲೆ ವಂಚನೆ ಪ್ರಕರಣದಲ್ಲಿ ಅರೆಸ್ಟ್ ವಾರೆಂಟ್ ಜಾರಿ
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಪೂಜಾ ಗಾಂಧಿ ಅವರ ತಂದೆ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ 27 ನೇ ಎ.ಸಿ.ಎಂ.ಎಂ. ನ್ಯಾಯಾಲಯ ವಾರೆಂಟ್ ಜಾರಿ ಮಾಡಿದೆ.
ಪೂಜಾ ಗಾಂಧಿ ಅವರ ತಂದೆ ಬೆಂಗಳೂರಿನ ಜಯನಗರ ಮತ್ತು ಬನಶಂಕರಿಯ ಆದೀಶ್ವರ್ ಶೋ ರೂಂಗಳಲ್ಲಿ ಪವನ್ ಕುಮಾರ್ ಗಾಂಧಿ 8 ಲಕ್ಷ ರೂ. ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸಿ ಹಣ ಕೊಡದೇ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ನೀಡಿದ್ದ ಚೆಕ್ ಬೌನ್ಸ್ ಆಗಿದ್ದು, ಶೋ ರೂಂನವರು ಕೋರ್ಟ್ ಮೆಟ್ಟಿಲೇರಿದ್ದಾರೆ. ವಂಚನೆ ಎಸಗಿದ ಕಾರಣಕ್ಕೆ ಪವನ್ ಕುಮಾರ್ ಅವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಾರೆಂಟ್ ನೊಂದಿಗೆ ಬನಶಂಕರಿಯಲ್ಲಿರುವ ಪೂಜಾ ಗಾಂಧಿ ಮನೆಗೆ ಎಡತಾಕಿದ್ದರೂ, ಪವನ್ ಕುಮಾರ್ ಗಾಂಧಿ ಪತ್ತೆಯಾಗಿಲ್ಲ. ಅವರು ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ.
Comments