ಮದುವೆ ಜಾಲವೊಂದರಲ್ಲಿ ಸಿಕ್ಕಿ ಬಿದ್ದರು, ನಾಲ್ವರು ಮುಸ್ಲಿಂ ಮುಲ್ಲಾಗಳು ಪೊಲೀಸರ ವಶಕ್ಕೆ

ಹೈದರಾಬಾದ್: ಮದುವೆ ಜಾಲವೊಂದರಲ್ಲಿ ಶಾಮೀಲಾಗಿರುವ ಆರೋಪದ ಮೇಲೆ ನಾಲ್ವರು ಮುಸ್ಲಿಂ ಮುಲ್ಲಾಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್: ಮದುವೆ ಜಾಲವೊಂದರಲ್ಲಿ ಶಾಮೀಲಾಗಿರುವ ಆರೋಪದ ಮೇಲೆ ನಾಲ್ವರು ಮುಸ್ಲಿಂ ಮುಲ್ಲಾಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಶೇಖ್ ಗಳು ಸೌದಿ ಅರೇಬಿಯಾ , ಒಮಾನ್ ಮತ್ತು ಕತಾರ್ ನವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊನ್ನೆ ಸೋಮವಾರ ಮುಂಬೈ ಮುಖ್ಯ ಕಾಝಿ ಫರೀದ್ ಅಹ್ಮದ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದರು. ಫರೀದ್ ಅಹ್ಮದ್ ಖಾನ್ ಅವರು ಅಪ್ರಾಪ್ತ ಖಾನ್ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮದುವೆ ಸರ್ಟಿಫಿಕೇಟ್ ಕೊಟ್ಟದ್ದನ್ನು ಆಧರಿಸಿ ಓಮಾನಿ ಶೇಖ್ ವಿಸಾ ಪಡೆದುಕೊಂಡಿದ್ದ.
ಪೊಲೀಸರ ಪ್ರಕಾರ ಸೌದಿ ಅರೇಬಿಯದ ಶೇಖ್ ಗಳು ಫಲೂಕ್ ನಾಮಾ ಮತ್ತು ಚಂದ್ರಾಯನ ಗುಟ್ಟ ಎಂಬಲ್ಲಿನ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಒಪ್ಪಂದದ ನೆಲೆಯಲ್ಲಿ ಮದುವೆಯಾಗಿದ್ದಾರೆ. ಪೊಲೀಸರು ಇದೇ ವೇಳೆ ನಾಲ್ಕು ಲಾಡ್ಜ್ ಗಳ ಓನರ್ ಗಳನ್ನು ಮತ್ತು ಐವರು ಮದುವೆ ಬ್ರೋಕರ್ ಗಳನ್ನು ಅರೆಸ್ಟ್ ಮಾಡಿರುವುದು ಬೆಳಕಿಗೆ ಬಂದಿದೆ.
Comments