ಸೋಲಾರ್ ವಿದ್ಯುತ್ ಘಟಕ ಸ್ಫೋಟಿಸಿದ ನಕ್ಸಲರು

ಈ ಘಟನೆಯು ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದ್ದು ,ನಕ್ಸಲರು ಸೋಲಾರ್ ವಿದ್ಯುತ್ ಘಟಕವೊಂದನ್ನು ಸ್ಫೋಟಿಸಿದ ಪರಿಣಾಮ ಕಂಟ್ರೋಲ್ ರೂಂ ಹಾಗೂ ಕಾರ್ಮಿಕರ ವಸತಿ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರಿಯಾಗಿ ಹಣ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ನಕ್ಸಲರು ಐಇಡಿ ಬಳಸಿ ಟಾಟಾ ಪವರ್ ಮಾಲೀಕತ್ವದ ಸೋಲಾರ್ ವಿದ್ಯುತ್ ಘಟಕವನ್ನು ನಿನ್ನೆ ರಾತ್ರಿ ಸ್ಫೋಟಿಸಿದ್ದಾರೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಸಿಂಗ್ ಅವರು ತಿಳಿಸಿದ್ದಾರೆ. ಸ್ಫೋಟದಿಂದಾಗಿ ಕಂಟ್ರೋಲ್ ರೂಂ ಮತ್ತು ಕಾರ್ಮಿಕ ವಸತಿ ಕಟ್ಟಡ ಸುಟ್ಟು ಕರಕಲಾಗಿವೆ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಐಇಡಿ ಬಾಂಬ್ ಸ್ಫೋಟಿಸಿದ ದುಷ್ಕರ್ಮಿಗಳಿಗಾಗಿ ಶೋಧ ನಡೆದಿದೆ ಎಂದು ಸಿಂಗ್ ತಿಳಿಸಿದ್ದಾರೆ.
Comments