ಹಣ ಇರುವವರನ್ನು ಯಾಮಾರಿಸಿ ಮದುವೆಯಾಗಿ ಒಡವೆ ದೋಚೋದೇ ಕಾಯಕ

ಮಹಿಳೆಯೊಬ್ಬಳು ತನ್ನ ಸೌಂದರ್ಯ ವನ್ನು ಬಂಡವಾಳ ಮಾಡಿಕೊಂಡು ,ನಾಲ್ಕು ಮದುವೆಯಾಗಿ ವಂಚಿಸಿದ್ದಾಳೆ. ತಿಪಟೂರಿನ ಈಚನೂರು ಮೂಲದ ಪುಷ್ಪಾವತಿ ಎನ್ನುವ ಮಹಿಳೆ ಹಲವು ದಿನಗಳಿಂದ ಈ ರೀತಿ ವಿವಾಹವಾಗಿ ಪುರುಷರನ್ನು ವಂಚಿಸುತ್ತಿದ್ದಳು. ಮೋಸಕ್ಕೆ ಬಲಿಯಾಗಿರುವ ತುಮಕೂರಿನ ಎಸ್.ಎಸ್. ಪುರಂ ನಿವಾಸಿ ಜಗದೀಶ್ ಎಂಬುವವರು ಪುಷ್ಪ ವಿರುದ್ಧ ಈ ಸಂಬಂಧ ದೂರು ನೀಡಿದ್ದಾರೆ.
2016 ರಲ್ಲಿ ಜಗದೀಶ್ ಎನ್ನುವರನ್ನು ಮದುವೆಯಾಗಿ ಅವರಿಂದಲೂ ದುಡ್ಡು, ಒಡವೆ ಪಡೆದು ಕಿರುಕುಳ ನೀಡುತ್ತಿದ್ದಾಳೆ. ಅಷ್ಟೇ ಅಲ್ಲದೇ ಹಾಸ್ಟಿಟಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ವೈದ್ಯಕೀಯ ವಿದ್ಯಾರ್ಥಿಗಳ ಜತೆಗೂ ಸಂಬಂಧ ಇಟ್ಟುಕೊಂಡಿದ್ದಳು ಎನ್ನುವ ಆರೋಪ ಇವಳ ಮೇಲಿದೆ. ಹಣ ಇರುವವರನ್ನು ಯಾಮಾರಿಸಿ ಮದುವೆಯಾಗಿ ಅವರಿಂದ ಹಣ, ಒಡವೆ ಕಿತ್ತುಕೊಂಡು ಬಳಿಕ ಅವರ ಮೇಲೆಯೇ ಕಿರುಕುಳ ಆರೋಪ ಮಾಡಿ ವಿಚ್ಛೇದನ ಪಡೆಯುವುದೇ ಕಾಯಕ ಮಾಡಿಕೊಂಡಿದ್ದಾಳೆ ಎಂದು ಜಗದೀಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 2000ನೇ ವರ್ಷದಲ್ಲಿ ತಿಪಟೂರು ಮೂಲದ ಲಿಂಗದೇವರು ಎನ್ನುವವರನ್ನು ಮದುವೆಯಾಗಿದ್ದ ಪುಷ್ಪಾವತಿ, ಅವರಿಂದಲೂ ಆಸ್ತಿ ಕಿತ್ತುಕೊಂಡು ವಿಚ್ಛೇದನ ಪಡೆದಿದ್ದಾಳೆ. ಪಕ್ಕದ ಮನೆಯ ಹುಡುಗನೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ಸಂದರ್ಭದಲ್ಲಿ ಪುಷ್ಪ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಳೆಂದು ಅವಳ ಎರಡನೇ ಪತಿ ಜಗದೀಶ್ ಹೇಳಿದ್ದಾರೆ.ಮಡದಿ ಪುಷ್ಪ ವಿರುದ್ಧ ಮಹಿಳಾ ಠಾಣೆಗೆ ದೂರು ಕೊಟ್ಟಿರುವ ಜಗದೀಶ್ ಇದೀಗ ವಿಚ್ಚೇದನ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
Comments