ಎಸ್ ಐಟಿ ತನಿಖೆಗೆ 'ಅಮ್ಮ' ನ ಸಹಮತ, ನನಗೂ ಅದೇ ಸಮ್ಮತ- ಇಂದ್ರಜಿತ್

ಎಸ್ ಐಟಿಯಿಂದಲೇ ಪ್ರಕರಣದ ತನಿಖೆ ಮುಂದುವರಿಸಬೇಕೆಂದು ನಮ್ಮ ತಾಯಿ ಇಂದಿರಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಹೀಗಿರುವಾಗ ನಾನು ನನ್ನ ತಾಯಿಯ ಇಚ್ಚೆಯ ವಿರುದ್ಧ ಹೋಗಿ ಸಿಬಿಐ ತನಿಖೆಗೆ ಒತ್ತಾಯಿಸುವುದಿಲ್ಲ ಎಂದು ಇಂದ್ರಜಿತ್ ಲಂಕೇಶ್ ಹೇಳಿದರು. ಈಗಾಗಲೇ ಎಸ್ ಐಟಿ ತಂಡ ನನ್ನ ತಾಯಿ ಮತ್ತು ನನ್ನಿಂದ ಅಧಿಕೃತ ಹೇಳಿಕೆ ಪಡೆದಿದೆ ಎಂದು ಸ್ಪಷ್ಟ ಪಡಿಸಿದರು .
ಎಸ್ ಐಟಿ ತನಿಖೆ ನಡೆಸುತ್ತಿದೆ, ಅವರಿಗೆ ನಾವು ಸಹಕಾರ ನೀಡಬೇಕು ಎಂದು ನಮ್ಮ ತಾಯಿ ಹೇಳಿದ್ದು ನನಗೆ ಸರಿ ಎನಿಸಿತು, ಗೌರಿ ಸಾವಿಗೆ ನಮಗೆ ನ್ಯಾಯ ಬೇಕಷ್ಟೇ ಎಂದು ಹೇಳಿದ್ದಾರೆ.ಇನ್ನು ಎಸ್ ಐಟಿ ನಿಮ್ಮನ್ನು ವಿಚಾರಣೆಗೆ ಒಳಪಡಿಸಿತ್ತೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತನಿಖಾ ತಂಡ ಮನೆಗೆ ಆಗಮಿಸಿ ಹೇಳಿಕೆ ದಾಖಲಿಸಿಕೊಂಡು ಹೋಗಿದೆ ಎಂದು ತಿಳಿಸಿದರು.ಗೌರಿ ಮತ್ತು ನಮ್ಮ ಸಂಬಂಧದ ಬಗ್ಗೆ ಅವರು ಪ್ರಶ್ನೆ ಮಾಡಿದರು. ಅವರಿಗೆ ನಮ್ಮ ವ್ಯವಹಾರಗಳ ಎಲ್ಲಾ ಮಾಹಿತಿಯನ್ನು ನೀಡಿದ್ದೇವೆ ಎಂದು ಹೇಳಿದ ಅವರು, ವಿಚಾರಣೆ ವೇಳೆ ನಾನು ಕುಸಿದು ಬಿದ್ದೆ ಎಂದು ಎಲೆಕ್ಟ್ರಾನಿಕ್ ಮಾಧ್ಯಮಗಳು ಪ್ರಸಾರ ಮಾಡಿದ ವರದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
Comments