ಅಮರನಾಥ್ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಹತ್ಯೆ

ಶ್ರೀನಗರ: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು -ಕಾಶ್ಮೀರದ ನೌಗಾಂವ್ ವಲಯದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಅಮರನಾಥ್ ಭಯೋತ್ಪಾದನಾ ದಾಳಿಯ ಪ್ರಮುಖ ಉಗ್ರ ಸಂಘಟನೆಯ ಕಟ್ಟರ್ ಭಯೋತ್ಪಾದಕ , ಅಬು ಇಸ್ಮಾಯಿಲ್ ಹತನಾಗಿದ್ದಾನೆ.
ಶ್ರೀನಗರ: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು -ಕಾಶ್ಮೀರದ ನೌಗಾಂವ್ ವಲಯದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಅಮರನಾಥ್ ಭಯೋತ್ಪಾದನಾ ದಾಳಇಯ ಪ್ರಮುಖ ಉಗ್ರ ಸಂಘಟನೆಯ ಕಟ್ಟರ್ ಭಯೋತ್ಪಾದಕ , ಅಬು ಇಸ್ಮಾಯಿಲ್ ಹತನಾಗಿದ್ದಾನೆ.
ಈ ಬೆಳವಣಿಗೆಗೆ ಪ್ರತಿಕ್ರಿಯೆ ನೀಡಿರುವ ಸಿಆರ್ ಪಿಎಫ್ ಮಹಾ ನಿರ್ದೇಶಕರಾದ ಮುನೀರ್ ಅಹ್ಮದ್ ಖಾನ್ ಅವರು ಇದೊಂದು ಬಹಳ ದೊಡ್ಡ ಸಾಧನೆ, ಹತನಾದ ಉಗ್ರ ಅಬು ಇಸ್ಮಾಯಿಲ್ ಅಮರನಾಥ್ ಯಾತ್ರೆ ಮೇಲಿನ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಎಂದು ಹೇಳಿದ್ದಾರೆ. ಈ ಅದ್ಭುತ ಯಶಸ್ಸಿಗಾಗಿ ನಾವು ಭದ್ರತಾ ಪಡೆಗಳ ತಂಡವನ್ನು ಅಭಿನಂದಿಸುತ್ತೇವೆ. ಉಗ್ರ ಅಬು ವಿರುದ್ಧದ ಎನ್ ಕೌಂಟರ್ ಕಾರ್ಯಾಚರಣೆ ಕೇವಲ ಅರ್ಧ ತಾಸಿನೊಳಗೆ ಮುಗಿದು ಹೋಯಿತು.ಆತನೇ ನಮ್ಮ ಪ್ರಮುಖ ಗುರಿಯಾಗಿದ್ದ ಎಂದು ಮುನೀರ್ ಅಹ್ಮದ್ ಖಾನ್ ಹೇಳಿದರು.
ಅಬು ಇಸ್ಮಾಯಿಲ್ ಹತನಾದ ಎನ್ ಕೌಂಟರ್ ಶ್ರೀನಗರ ಹೊರವಲಯದ ನೌಗಾಂವ್ ನ ಅರಿಗಾಂವ್ ಎಂಬಲ್ಲಿ ನಡೆಯಿತು. ಅಬು ಇಸ್ಮಾಯಿಲ್ ಎಲ್ ಇಟಿ ಉಗ್ರ ಮತ್ತು ಪಾಕ್ ಪ್ರಜೆಯಾಗಿದ್ದಾನೆ. ಈ ವರ್ಷ ಜುಲೈ ತಿಂಗಳಲ್ಲಿ ಎಂಟು ಮಂದಿ ಅಮರನಾಥ್ ಯಾತ್ರಿಕರನ್ನು ಕೊಲ್ಲಲಾದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದಾನೆ.
ಈ ವರ್ಷ ಆಗಸ್ಟ್ ನಲ್ಲಿ ಪುಲ್ವಾಮಾ ಎನ್ ಕೌಂಟರ್ ನಲ್ಲಿ ಲಷ್ಕರ್ ಮುಖ್ಯಸ್ಥ ಅಬು ದುಜಾನಾ ಹತನಾದ ಬಳಿಕ ಆತನ ಉತ್ತರಾಧಿಕಾರಿಯಾಗಿದ್ದ ಅಬು ಇಸ್ಮಾಯಿಲ್ ಕಾಶ್ಮೀರ ಕಣಿವೆಯಲ್ಲಿ ಎಲ್ ಇಟಿ ಉಗ್ರ ದಾಳಿಗಳ ಮುಖ್ಯಸ್ಥನಾಗಿ ದುಡಿಯುತ್ತಿದ್ದ.
Comments