ಐಟಿ ಅಧಿಕಾರಿಯ ಮಗನನ್ನು ಅಪಹರಸಿ, 50 ಲಕ್ಷ ರೂ. ಗೆ ಬೇಡಿಕೆ ಇಡಲಾಗಿದೆ

ಐಟಿ ಅಧಿಕಾರಿ ನಿರಂಜನ್ ರವರ ಪುತ್ರ ಶರತ್ ನ್ನು ಎರಡು ದಿನಗಳ ಹಿಂದೆ ಅಪಹರಿಸಿ, ಬಿಡುಗಡೆ ಮಾಡಬೇಕಿದ್ದರೆ 50 ಲಕ್ಷ ರೂ. ಹಣ ಕೊಡಬೇಕೆಂದು ಬೆದರಿಕೆ ಹಾಕಿ ಶರತ್ ತಂದೆ, ತಾಯಿ ಹಾಗೂ ಸೋದರನ ವಾಟ್ಸ್ ಆಪ್ ಗೆ ಸಂದೇಶ ಕಳಿಸಲಾಗಿದೆ.
ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಕೆಂಗೇರಿ ಉಳ್ಳಾಲದಲ್ಲಿರುವ ನಿರಂಜನ್ ಎನ್ನುವ ಅಧಿಕಾರಿ ಪುತ್ರ ಶರತ್ನನ್ನು ಎರಡು ದಿನಗಳ ಹಿಂದೆ ಅಪಹರಿಸಲಾಗಿದೆ. ಶರತ್ 2ನೇ ವರ್ಷದ ಡಿಪ್ಲೋಮಾ ಓದುತ್ತಿದ್ದು, ಅಪಹರಣದ ಬಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆಗೆ ತಂದೆ ನಿರಂಜನ್ ದೂರು ಸಲ್ಲಿಸಿದ್ದಾರೆ. ಪೊಲೀಸರು ಅಪಹರಣಕಾರರ ಜಾಡು ಪತ್ತೆ ಹಚ್ಚಲು ಕಾರ್ಯತತ್ಪರರಾಗಿದ್ದಾರೆ.
Comments