ಗೌರಿ ಹತ್ಯೆಯ ಖಂಡನೆಗೆ ವಿಶ್ವ ಸಂಸ್ಥೆಯ ಸಾಥ್



ಸಮಾಜದ ಪಿಡುಗುಗಳ ವಿರುದ್ಧ ಧ್ವನಿ ನೀಡುತ್ತಿದ್ದ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರುವುದನ್ನು ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿ ಅಧ್ಯಕ್ಷ ಝಯೇದ್ ರಾದ್ ಅಲ್ ಹುಸೇನ್ ಖಂಡಿಸಿದ್ದಾರೆ. ಗೌರಿಯವರ ಹತ್ಯೆಯ ಬಗ್ಗೆ ವಿಶ್ವ ಸಂಸ್ಥೆಯಲ್ಲಿ ಝಯೇದ್ ರಾದ್ ಅಲ್ ಹುಸೇನ್ ಮಾತನಾಡಿದರು. ಭಾರತದಲ್ಲಿ ನಡೆಯುತ್ತಿದ್ದ ಜನಾಂಗೀಯ ದ್ವೇಷ ಹಾಗೂ ಮತೀಯವಾದದ ವಿರುದ್ಧ ಗೌರಿ ಹೋರಾಡುತ್ತಿದ್ದರು. ಅಂಥವರ ಹತ್ಯೆ ಖಂಡನಾರ್ಹ ಎಂದರು.
ಮೂಲಭೂತ ಮಾನವ ಹಕ್ಕುಗಳ ಪರ ಮಾತನಾಡುವವರನ್ನು ಬೆದರಿಸಲಾಗುತ್ತಿದೆ ಎಂದಿದ್ದಾರೆ. ಅಲ್ಲದೆ, ಗೌರಿ ಹತ್ಯೆಯ ಹಿನ್ನಲೆಯಲ್ಲಿ ವಿವಿಧ ನಗರಗಳಲ್ಲಿ ನಡೆದ ವಾಕ್ ಸ್ವಾತಂತ್ರ್ಯ ಪರ ಪ್ರತಿಭಟನೆಗಳನ್ನು ಕಂಡು ನೋವಾಗುತ್ತಿದೆ ಎಂದು ಹೇಳಿದ್ದಾರೆ. ತಥಾಕಥಿತ ಗೋರಕ್ಷಕರಿಂದ ನಡೆಯುವ ಹಲ್ಲೆಗಳನ್ನೂ ಹುಸೇನ್ ಖಂಡಿಸಿದ್ದಾರೆ. ಇದೇ ವೇಳೆ ವಿಶ್ವಸಂಸ್ಥೆಯಿಂದ ನಿರಾಶ್ರಿತರು ಎಂಬ ಮಾನ್ಯತೆ ಪಡೆದ ಮ್ಯಾನ್ಮಾರ್ ನ ರೋಹಿಂಗ್ಯ ಮುಸ್ಲಿಮರನ್ನು ಭಾರತ ಗಡೀಪಾರು ಮಾಡಬಾರದು ಎಂದು ಆಗ್ರಹಿಸಿದ್ದಾರೆ.
Comments