ಗೌರಿ ಹತ್ಯೆ ಕೇಸ್ ನಲ್ಲಿ ನನ್ನನ್ನು ಅನುಮಾನಿಸಲಾಗುತ್ತಿದೆ, ಪೊಲೀಸರ ಮುಂದೆ ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್

ಬೆಂಗಳೂರು: ಗೌರಿ ಮತ್ತು ಇಂದ್ರಜಿತ್ ಲಂಕೇಶ್ ಮಧ್ಯೆ ನಡೆದಿದ್ದ ಜಗಳದ ಕಾರಣದಿಂದ ಪೊಲೀಸರು ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಬೆಂಗಳೂರು: ಗೌರಿ ಮತ್ತು ಇಂದ್ರಜಿತ್ ಲಂಕೇಶ್ ಮಧ್ಯೆ ನಡೆದಿದ್ದ ಜಗಳದ ಕಾರಣದಿಂದ ಪೊಲೀಸರು ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಪೊಲೀಸರ ಮುಂದೆಯೇ ಇಂದ್ರಜಿತ್ ಲಂಕೇಶ್ ಕಣ್ಣೀರು ಹಾಕಿದ ಘಟನೆ ನಡೆದಿದೆ.
ಲಂಕೇಶ್ ನಿಧನದ ನಂತರ ಗೌರಿ ಲಂಕೇಶ್ ಹಾಗೂ ಇಂದ್ರಜಿತ್ ಲಂಕೇಶ್ ಮಧ್ಯೆ ಪತ್ರಿಕೆಯ ಒಡೆತನದ ವಿಚಾರವಾಗಿ ಗೌರಿ ಮತ್ತು
ಇಂದ್ರಜಿತ್ ಮಧ್ಯೆ ಜಗಳವಾಗಿತ್ತು. ಈ ವಿಚಾರವಾಗಿ ತನ್ನ ಅಕ್ಕನಿಗೆ ರಿವಾಲ್ವರ್ ಇಟ್ಟು ಇಂದ್ರಜಿತ್ ಬೆದರಿಸಿದ್ದರು ಎಂದು ಗೌರಿ ಲಂಕೇಶ್ ಈ ಹಿಂದೆ ಬಸವನ ಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಗೌರಿ ಲಂಕೇಶ್ ಕಚೇರಿಯಲ್ಲಿದ್ದ
ಕಂಪ್ಯೂಟರ್ ಮತ್ತಿತರ ವಸ್ತುಗಳನ್ನು ಕದ್ಯೊಯ್ದಿದ್ದಾರೆ ಎಂದು ಇಂದ್ರಜಿತ್ ಕಂಪ್ಲೇಟ್ ನೀಡಿದ್ದರು. ಇದೆಲ್ಲಾ ನಡೆದಿದ್ದು
2005ರಲ್ಲಿ.
ಅದಾದ ಬಳಿಕ ಇಬ್ಬರ ಮಧ್ಯೆ ರಾಜಿ ಸಂಧಾನದ ಮೂಲಕ 2007ರಲ್ಲಿ ಜಗಳ ಅಂತ್ಯ ಕಂಡಿತ್ತು. ಈಗ ಹಳೆಯ ಪ್ರಕರಣದ ಮಾಹಿತಿ
ಹಾಕುತ್ತಿರುವ ಅಧಿಕಾರಿಗಳು ಇಂದು ಇಂದ್ರಜಿತ್ ಲಂಕೇಶ್ ಅವರನ್ನು ವಿಚಾರಣೆ ನಡೆಸಿದ್ದಾರೆ. ನಿಮ್ಮ ಹತ್ತಿರ ಇರುವ ರಿವಾಲ್ವರ್ ಪರವಾನಗಿ ಪಡೆದಿದ್ದೀರಾ? ಗೌರಿಗೆ ಬೆದರಿಸಿದ್ದ ರಿವಾಲ್ವರ್ ಯಾವುದು? ಎಂದು ತನಿಖಾಧಿಕಾರಿಗಳು ಪ್ರಶ್ನಿಸಿದಾಗ ಇಂದ್ರಜಿತ್
ಲಂಕೇಶ್ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ನೀವು ವಿನಾಕಾರಣ ನನ್ನನ್ನು ಅನುಮಾನಿಸುತ್ತಿದ್ದೀರಾ ಎಂದು ಇಂದ್ರಜಿತ್ ಲಂಕೇಶ್ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ.
Comments