ಉಗ್ರ ಸಂಘಟನೆಗೆ ಸೇರಲು ಪ್ರೇರಣೆ ನೀಡುತ್ತಿದ್ದ ಯುವಕನ ಬಂಧನ

ಶ್ರೀನಗರ: ಉಗ್ರ ಸಂಘಟನೆಗಳಿಗೆ, ಉಗ್ರ ಚಟುವಟಿಕೆಗಳಿಗೆ ಪ್ರೇರೆಪಿಸುತ್ತಿದ್ದ ಯುವಕನನ್ನು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಸೇನೆ ಮತ್ತು ಕಾಶ್ಮೀರಿ ಪೊಲೀಸರು ಉಗ್ರ ಸಂಘಟನೆಗಳಿಗೆ ಪ್ರೇರೆಪಿಸುತ್ತಿದ್ದವರ ಮೇಲೆ ನಿಗಾ ಇಟ್ಟಿದ್ದಾರೆ.
ಶ್ರೀನಗರ: ಉಗ್ರ ಸಂಘಟನೆಗಳಿಗೆ, ಉಗ್ರ ಚಟುವಟಿಕೆಗಳಿಗೆ ಪ್ರೇರೆಪಿಸುತ್ತಿದ್ದ ಯುವಕನನ್ನು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಸೇನೆ ಮತ್ತು ಕಾಶ್ಮೀರಿ ಪೊಲೀಸರು ಉಗ್ರ ಸಂಘಟನೆಗಳಿಗೆ ಪ್ರೇರೆಪಿಸುತ್ತಿದ್ದವರ ಮೇಲೆ ನಿಗಾ ಇಟ್ಟಿದ್ದಾರೆ. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರುವಂತೆ ಯುವಕರಿಗೆ ಪ್ರೇರೆಪಿಸುತ್ತಿದ್ದ ಇಷ್ತಿಯಾಕ್ ವನಿ ಎಂಬಾತನನ್ನು ಬಾರಾಮುಲ್ಲಾ ಪೊಲೀಸರು ಬುಧುವಾರ ಬಂಧಿಸಿದ್ದಾರೆ.
ಈ ಹಿಂದೆ ಉಗ್ರ ಸಂಘಟನೆಗೆ ಸೇರಲು ಸಿದ್ಧವಾಗಿದ್ದ 10 ಬಾಲಕರನ್ನು ಪೊಲೀಸರು ರಕ್ಷಿಸಿದ್ದರು. ರಕ್ಷಿಸಲ್ಪಟ್ಟ ಬಾಲಕರಲ್ಲಿ ನಾಲ್ವರಿಗೆ ಇಷ್ತಾಕಿ ವನಿ ಪ್ರೇರೆಣೆ ನೀಡಿದ್ದ, ಈ ಹಿನ್ನಲೆಯಲ್ಲಿ ವನಿಯನ್ನು ಬಂಧಿಸಲಾಗಿದೆ.
Comments