ಬ್ರಿಟನ್ನಲ್ಲಿದ್ದ 45,000 ಕೋಟಿ ದಾವೂದ್ ಇಬ್ರಾಹಿಂ ಆಸ್ತಿ ಜಪ್ತಿ , ಮೋದಿ ಪ್ಲಾನ್ ಸಕ್ಸೆಸ್

ಅಂತಾರಾಷ್ಟ್ರೀಯ ಭಯೋತ್ಪಾದಕ ಮತ್ತು ಕುಪ್ರಸಿದ್ಧ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಭಾರೀ ಹೊಡೆತ ನೀಡುವಲ್ಲಿ ಭಾರತ ದೊಡ್ಡ ಮಟ್ಟದ ಯಶಸ್ಸು ಸಾಧಿಸಿದೆ.
ಕೇಂದ್ರ ಸರ್ಕಾರದ ಪರಿಶ್ರಮದ ಫಲವಾಗಿ ಲಂಡನ್‍ನಲ್ಲಿದ್ದ ದಾವೂದ್ ಒಡೆತನದ 45,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಬ್ರಿಟನ್ ಸರ್ಕಾರ ಜಪ್ತಿ ಮಾಡಿದೆ. ಲಂಡನ್‍ನಲ್ಲಿ ದಾವೂದ್ 6.7 ಶತಕೋಟಿ ಡಾಲರ್‍ಗಳಷ್ಟು ಅಕ್ರಮ ಆಸ್ತಿ-ಪಾಸ್ತಿ ಹೊಂದಿದ್ದಾನೆ ಎಂದು ಭಾರತ ಸರ್ಕಾರ ಜಾರಿ ನಿರ್ದೇಶನಾಲಯ (ಇಡಿ) 2015ರಲ್ಲಿ ಬ್ರಿಟನ್ ಸರ್ಕಾರಕ್ಕೆ ದಾಖಲೆಗಳ ಸಮೇತ ವರದಿ ಮಾಡಿ, ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳು ವಂತೆ ಕೋರಿತ್ತು.
ಭಾರತ ನೀಡಿದ ದಸ್ತಾವೇಜುಗಳನ್ನು ಗಂಭೀರವಾಗಿ ಪರಿಗಣಿಸಿದ ಬ್ರಿಟನ್ ಸರ್ಕಾರ, ಆದಾಯ ಇಲಾಖೆ ಮತ್ತು ಪೊಲೀಸರ ಸಹಕಾರದೊಂದಿಗೆ ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕಿ ದಾವೂದ್‍ಗೆ ಮಾಸ್ಟರ್ ಸ್ಟ್ರೋಕ್ ನೀಡಿದೆ. ಇಂಗ್ಲೆಂಡ್‍ನ ಪ್ರತಿಷ್ಠಿತ ವಾರ್‍ಲೇಕ್‍ಶೈರ್‍ನಲ್ಲಿರುವ 45,000 ಕೋಟಿ ರೂ. ಮೌಲ್ಯದ ಭವ್ಯ ರೆಸ್ಟೋರೆಂಟ್, ಇತರ ವಾಣೀಜ್ಯ ಕಟ್ಟಡಗಳೂ ಸೇರಿದಂತೆ ಅಪಾರ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.
ಭಾರತ, ದುಬೈ ನಂತರ ಭೂಗತಪಾತಕಿಯ ಇಂಗ್ಲೆಂಡ್‍ನಲ್ಲಿರುವ ಭಾರೀ ಪ್ರಮಾಣದ ಸ್ವತ್ತುಗಳನ್ನು ವಶಪಡಿಸಿಕೊಂಡಿರುವುದರಿಂದ ದಾವೂದ್‍ಗೆ ಮರ್ಮಾಘಾತ ನೀಡಿದಂತಾಗಿದೆ.ಈತನಕ ನಂಬಲಾಗಿರುವಂತೆ ಪಾಕಿಸ್ತಾನದ ಬಂದರು ನಗರಿ ಕರಾಚಿಯ ಗುಪ್ತ ಸ್ಥಳದಲ್ಲಿ ಆಶ್ರಯ ಪಡೆದಿರುವ ದಾವೂದ್ ಇಬ್ರಾಹಿಂ 16ಕ್ಕೂ ಹೆಚ್ಚು ದೇಶಗಳಲ್ಲಿ ಬಹುಕೋಟಿ ರೂ. ಮೌಲ್ಯದ ಆಸ್ತಿ-ಪಾಸ್ತಿಗಳ ಒಡೆತನ ಹೊಂದಿದ್ಧಾನೆ.
Comments