ಸೆ.25 ರೊಳಗೆ ವಿಧಾನಸೌಧಕ್ಕೆ ಬಾಂಬ್ ಹಾಕುವುದಾಗಿ ಬೆದರಿಕೆ ಕರೆ !

12 Sep 2017 12:51 AM | Crime
316 Report

ಬೆಂಗಳೂರು: ವಿಧಾನಸೌಧಕ್ಕೆ ಬೆದರಿಕೆ ಕರೆಯೊಂದು ಬಂದು ಆತಂಕಕ್ಕೀಡು ಮಾಡಿದೆ. ವಿಧಾನಸೌಧ ಹಾಗೂ ನೆಹರು ತಾರಾಲಯಕ್ಕೆ ಸೆಪ್ಟೆಂಬರ್ 25ರೊಳಗೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರು ಬೆದರಿಕೆ ಹಾಕಿದ ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸೆಪ್ಟೆಂಬರ್ 25 ರೊಳಗೆ ವಿಧಾನಸೌಧಕ್ಕೆ ನಾಗರಾಜ್ ಎಂಬಾತ್ ಬಾಂಬ್ ಹಾಕುತ್ತಾನೆ ಎಂದು ಸುರೇಶ್ ಎಂಬಾತ ವಿಧಾನಸೌಧ
ಪೊಲೀಸ್ ನಿಯಂತ್ರಣ ಕಚೇರಿಗೆ ಬೆದರಿಕೆ ಕರೆ ಬಂದಿರುವುದಾಗಿ ವರದಿ ಹೇಳಿದೆ.ಬಾಂಬ್ ಬೆದರಿಕೆ ಕರೆ ಬಂದಿರುವುದರಿಂದ ವಿಧಾನಸೌಧದ ಸುತ್ತ ಮುತ್ತ ಹೈ ಅಲರ್ಟ್ ಘೋಷಿಸಲಾಗಿದೆ. ಬೆದರಿಕೆ ಕರೆ ಬಗ್ಗೆ ವಿಧಾನಸೌಧ ಪೊಲೀಸ್ ಠಾಣಯಲ್ಲಿ ಪ್ರಕರಣ ದಾಖಲಾಗಿದೆ.

Edited By

Shruthi G

Reported By

Sudha Ujja

Comments