ಹಿರಿಯ ನಟಿ ಬಿವಿ ರಾಧಾ ವಿಧಿವಶ
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಇಂದು ಬೆಳಗ್ಗೆಯೇ ಮತ್ತೊಂದು ಆಘಾತಯಾಗಿದೆ. ಹಿರಿಯ ನಟಿ ಬಿವಿ ರಾಧಾ ಇಹಲೋಕ ತ್ಯಜಿಸಿದ್ದಾರೆ.
ಬೆಂಗಳೂರು: ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಇಂದು ಬೆಳಗ್ಗೆಯೇ ಮತ್ತೊಂದು ಆಘಾತಯಾಗಿದೆ. ಹಿರಿಯ ನಟಿ ಬಿವಿ ರಾಧಾ ಇಹಲೋಕ ತ್ಯಜಿಸಿದ್ದಾರೆ.
ಗಾಯಕ, ನಿರ್ದೇಶಕ ಕೆಎಸ್ ಎಲ್ ಸ್ವಾಮಿ ಅವರ ಪತ್ನಿಯಾಗಿರುವ ನಟಿ ಬಿವಿ ರಾಧಾಗೆ ನಿನ್ನೆ ರಾತ್ರಿ ಹೃದಯಾಘಾತವಾಗಿತ್ತು. ಈ ಹಿನ್ನಲೆಯಲ್ಲಿ ಅವರನ್ನು ಕಲ್ಯಾಣನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಸುಮಾರು 250 ಕ್ಕೂ ಹೆಚ್ಚು ಸಿನಿಮಾ, ಧಾರವಾಹಿಗಳಲ್ಲೂ ನಟಿಸಿದ್ದರು.
Comments