ಮುಂಬೈ ಬ್ಲಾಸ್ಟ್ ಪ್ರಕರಣ : ಸಲೇಂಗೆ ಜೀವಾವಧಿ ಶಿಕ್ಷೆ, ಇನ್ನಿಬ್ಬರಿಗೆ ಗಲ್ಲು
ಮುಂಬೈ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂಬೈನ ವಿಶೇಷ ಟಾಡಾ ನ್ಯಾಯಾಲಯ ತಾಹಿರ್ ಮರ್ಜೆಂಟ್ ಹಾಗೂ ಫಿರೋಜ್ ಗೆ ಮರಣದಂಡನೆ ವಿಧಿಸಿದೆ. ಹಾಗೆ, ಗ್ಯಾಂಗ್ ಸ್ಟಾರ್ ಅಬು ಸಲೇಂಗೆ ಜೀವಾವಧಿ, ರಿಯಾಜ್ ಅಹ್ಮದ್ ಸಿದ್ದಿಖಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.ಟಾಡಾ ಕಾಯದೆ ಅನ್ವಯ, ಕೊಲೆ, ಅಪರಾಧ ಸಂಚಿನಡಿ ಖರೀಮುಲ್ಲಾ ಖಾನ್ ಹಾಗೂ ಅಬು ಸಲೇಂಗೆ ಜೀವಾವಧಿ ಶಿಕ್ಷೆ ಹಾಗೂ 2 ಲಕ್ಷ ರೂಪಾಯಿ ದಂಡ ವಿಧಿಸಿದೆ.

1993ರ ಸರಣಿ ಸ್ಫೋಟ ಪ್ರಕರಣದಲ್ಲಿ ಆರು ಮಂದಿಯಲ್ಲಿ ಐವರನ್ನು ದೋಷಿ ಎಂದು ಜೂನ್ ತಿಂಗಳಲ್ಲಿ ತೀರ್ಪು ನೀಡಿದ್ದು,ಇಂದು ವಿಶೇಷ ಟಾಡಾ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ದೋಷಿ ಎಂಬ ತೀರ್ಪು ಹೊರಬಿದ್ದ ಬಳಿಕ ಆರೋಪಿ ಮುಸ್ತಫಾ ದೊಸ್ಸಾ ಸಾವನ್ನಪ್ಪಿದ್ದ. ಟಾಡಾ ನ್ಯಾಯಾಲಯ ಕಾನೂನಿನ ಪ್ರಕಾರ, ಜೀವಾವಧಿ ಶಿಕ್ಷೆ ಎಂದರೆ, ಜೀವತಾವಧಿಯ ಕೊನೆಯವರೆಗೂ ಜೈಲು ಶಿಕ್ಷೆ ಅನುಭವಿಸಬೇಕು. ಏತನ್ಮಧ್ಯೆ ಗಡಿಪಾರು ಕಾಯ್ದೆಯನ್ವಯ ಗರಿಷ್ಠ 25 ವರ್ಷ ಜೈಲುಶಿಕ್ಷೆ ನೀಡಬಹುದಾಗಿದೆ.
Comments