3 ದಿನದ ಹಿಂದೆಯೇ ಗೌರಿ ಲಂಕೇಶ್ ಹತ್ಯೆಗೆ ಯತ್ನ , ಎರಡು ನಂಬರ್ ಗಳಿಂದ ನಿರಂತರ ಮಿಸ್ ಕಾಲ್, ಬ್ಲಾಂಕ್ ಮೆಸೇಜ್

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಸಿಕ್ಕಿದೆ. ಮೂರು ದಿನದ ಹಿಂದೆಯೇ ಅಂದರೆ ಸೆಪ್ಟೆಂಬರ್ 2ರಿಂದಲೇ ಗೌರಿ ಲಂಕೇಶ್ ಹತ್ಯೆಗೆ ದುಷ್ಕರ್ಮಿಗಳು ಪ್ರಯತ್ನ ಮಾಡಿದ್ದರು ಎಂದು ತಿಳಿದುಬಂದಿದೆ.
ಸ್ಥಳೀಯರು ಎಂಟ್ರಿಕೊಟ್ಟಿದ್ದರಿಂದ ಅವತ್ತಿನ ಹತ್ಯೆ ಯತ್ನ ತಪ್ಪಿತ್ತು. ಹತ್ಯೆ ಪ್ಲಾನ್ ತಪ್ಪಿದ ಬಳಿಕ ಗೌರಿ ಲಂಕೇಶ್‍ಗೆ ಎರಡು ನಂಬರ್ ಗಳಿಂದ ನಿರಂತರ ಮಿಸ್ ಕಾಲ್ ಬರುತ್ತಿತ್ತು. ದುಷ್ಕರ್ಮಿಗಳು ಬ್ಲಾಂಕ್ ಮೆಸೇಜ್‍ಗಳನ್ನು ಕಳುಹಿಸ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.
ಮೂರು ದಿನದ ಹಿಂದೆಯೇ ದುಷ್ಕರ್ಮಿಗಳು ಗೌರಿ ಲಂಕೇಶ್‍ರನ್ನು ಫಾಲೋ ಮಾಡಿದ್ರು. ಖಾಸಗಿ ಕಾರ್ಯಕ್ರಮಕ್ಕೆ ಹೋಗಿದ್ದರಿಂದ ಹತ್ಯೆ ಮಿಸ್ ಆಗಿತ್ತು. ಮೂರು ದಿನದ ಹಿಂದೆಯೇ ವೈಟ್ ಕಲರ್ ಆಕ್ಟೀವಾ ಮಾದರಿಯ ಗಾಡಿ ನಿರಂತರವಾಗಿ ಮನೆಯ ಆಸುಪಾಸಿನಲ್ಲೇ ಓಡಾಡಿದೆ. ಪ್ರತಿಬಾರಿ ಬಂದಾಗ್ಲೂ ದುಷ್ಕರ್ಮಿಗಳು ಹೆಲ್ಮೆಟ್ ಧರಿಸಿದ್ದಾರೆ. ಶನಿವಾರ ಮಧ್ಯಾಹ್ನ ಮೂರು ಬಾರಿ ಮನೆಯ ಮುಂದೆಯೇ ಸುತ್ತುವರೆದಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
Comments