ಖ್ಯಾತ ಪತ್ರಕರ್ತೆ ಗೌರಿ ಲಂಕೇಶರನ್ನು ಗುಂಡುಹಾರಿಸಿ ಹತ್ಯೆ

ಬೆಂಗಳೂರು: ಖ್ಯಾತ ಪತ್ರಕರ್ತೆ, ಸಾಹಿತಿ, ಚಿಂತಕಿ ಗೌರಿ ಲಂಕೇಶ್ ಹತ್ಯೆ ಮಾಡಲಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ಮನೆಯೊಂದರಲ್ಲೇ ಗೌರಿ ಲಂಕೇಶ್ ಹತ್ಯೆ ನಡೆದಿದೆ.ಗೌರಿ ಲಂಕೇಶ್ ಎದೆ ಭಾಗಕ್ಕೆ ಎರಡು ಗುಂಡು, ಹಣೆ ಭಾಗಕ್ಕೆ 1 ಗುಂಡು ತಗುಲಿದೆ. ಈ ವೇಳೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಗೌರಿ ಲಂಕೇಶ್ ಅವರನ್ನು ಮನೆಯ ಬಾಗಿಲು ಬಳಿ ನಿಂತಿದ್ದ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
ಮನೆಯ ಗೋಡೆಗೆ ನಾಲ್ಕು ಗುಂಡುಗಳು ತಾಗಿವೆ. ಮೂವರು ದುಷ್ಕರ್ಮಿಗಳು ತುಂಬಾ ಹತ್ತಿರದಿಂದಲೇ ಗುಂಡಿನ ದಾಳಿ ನಡೆಸಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತೇವೆ, ಅವರಿಗೆ ಜೀವ ಬೆದರಿಕೆ ಇತ್ತು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಸುಮಾರು 7.45ಕ್ಕೆ ಹತ್ಯೆ ನಡೆಸಲಾಗಿದೆ.
Comments