ಯಡಿಯೂರಪ್ಪ ಮಗನ ಕಾರಿಗೆ ಪಾದಾಚಾರಿ ಬಲಿ; ಸ್ಥಳದಲ್ಲೇ ಯುವಕನ ಸಾವು

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಪುತ್ರ, ಶಿಕಾರಿಪುರ ಶಾಸಕ ಬಿ.ವೈ ರಾಘವೇಂದ್ರ ಅವರ ಕಾರಿಗೆ ಪಾದಾಚಾರಿಯೊಬ್ಬರು ಬಲಿಯಾಗಿದ್ದಾರೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ಬಳಿಯ ನ್ಯಾಮತಿಯಲ್ಲಿ ಆಟೋ ಇಳಿದು ಹೋಗುತ್ತಿದ್ದ ಸುಮಾರು 20 ವರ್ಷದ ಸುರೇಶ್ ಎಂಬವರಿಗೆ ವೇಗವಾಗಿ ಬಂದ ರಾಘವೇಂದ್ರ ಅವರು ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಯುವಕನ ದೇಹ ಸುಮಾರು 50 ಮೀಟರ್ ದೂರಕ್ಕೆ ಹೋಗಿ ಬಿದ್ದಿದೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಸುರೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತವಾದ ಸ್ಥಳಕ್ಕೆ ಬಂದ ರಾಘವೇಂದ್ರ ಅವರು ಸುಮಾರು 10 ನಿಮಿಷ ಅಲ್ಲೇ ನಿಂತಿದ್ರು. ಆಮೇಲೆ ಯಾರಿಗೂ ಗೊತ್ತಾಗದಂತೆ ಬೇರೊಂದು ಕಾರಿನಲ್ಲಿ ಎಸ್ಕೇಪ್ ಆಗಿದ್ದಾರೆ. ಇದ್ರಿಂದ ರೊಚ್ಚಿಗೆದ್ದ ಗ್ರಾಮಸ್ಥರು ರಾಘವೇಂದ್ರ ಸ್ಥಳಕ್ಕೆ ಬಂದು ಸಾಂತ್ವನ ಹೇಳಿ ಪರಿಹಾರ ನೀಡೋವರೆಗೂ ಶವವನ್ನು ತೆಗೆಯಲು ಬಿಡಲ್ಲ ಎಂದು ಪಟ್ಟುಹಿಡಿದಿದ್ರು.
ಬಳಿಕ ಮಾಜಿ ಸಚಿವ ರೇಣುಕಾಚಾರ್ಯ ಬಂದ್ರು, ಒಂದಿಷ್ಟು ಪರಿಹಾರ ಕೊಡಿಸ್ತೀನಿ ಅಂತಾ ಮಾತುಕತೆ ನಡೆಸಿ, ಸಂಧಾನ ಮಾಡಿದ್ರು, ಆಮೇಲೆ ಗ್ರಾಮಸ್ಥರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿಕೊಡಲು ಒಪ್ಪಿಕೊಂಡ್ರು.
ಘಟನಾ ಸ್ಥಳಕ್ಕೆ ನ್ಯಾಮತಿ ಠಾಣಾ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.
Comments