ವರದಿ: ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣ, ಅತಿ ಹೆಚ್ಚು ಶಾಸಕರು, ಸಂಸದರು ಬಿಜೆಪಿಯವರು

ನವದೆಹಲಿ: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಅತಿಹೆಚ್ಚು ಮಂದಿ ಸಂಸದರು, ಶಾಸಕರು ಮೊದಲನೇಯ ಸ್ಥಾನ ಪಡೆದುಕೊಂಡಿದ್ದಾರೆ. ದೇಶದ ಆಘಾತಕಾರಿ ವರದಿಯನ್ನು ಎನ್ ಜಿಒ ವೊಂದು ವರದಿ ಮಾಡಿದೆ. ದೇಶದ ಎಲ್ಲಾ ರಾಜ್ಯಗಳ ಒಟ್ಟು 4896 ಶಾಸಕರಲ್ಲಿ, 4078 ಹಾಗೂ 776 ಸಂಸದರಲ್ಲಿ 774 ನಾಯಕರ ಚುನಾವಣಾ ಪ್ರಮಾಣ ಪತ್ರಗಳನ್ನು ವಿಶ್ಲೇಷಣೆಗೊಳಪಡಿಸಿ ವರದಿ ತಯಾರು ಮಾಡಲಾಗಿದೆ.
ನವದೆಹಲಿ: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಅತಿಹೆಚ್ಚು ಮಂದಿ ಸಂಸದರು, ಶಾಸಕರು ಮೊದಲನೇಯ ಸ್ಥಾನ ಪಡೆದುಕೊಂಡಿದ್ದಾರೆ. ದೇಶದ ಆಘಾತಕಾರಿ ವರದಿಯನ್ನು ಎನ್ ಜಿಒ ವೊಂದು ವರದಿ ಮಾಡಿದೆ. ದೇಶದ ಎಲ್ಲಾ ರಾಜ್ಯಗಳ ಒಟ್ಟು 4896 ಶಾಸಕರಲ್ಲಿ, 4078 ಹಾಗೂ 776 ಸಂಸದರಲ್ಲಿ 774 ನಾಯಕರ ಚುನಾವಣಾ ಪ್ರಮಾಣ ಪತ್ರಗಳನ್ನು ವಿಶ್ಲೇಷಣೆಗೊಳಪಡಿಸಿ ವರದಿ ತಯಾರು ಮಾಡಲಾಗಿದೆ. ಅಚ್ಚರಿ ವರದಿ ಹೊರಬಂದಿದ್ದು, 48 ವಿಧಾನಸಭೆ ಸದಸ್ಯರು ಮತ್ತು ಮೂವರು ಸಂಸದರು ಸೇರಿ ಒಟ್ಟು 51 ಮಂದಿ ಈ ರೀತಿಯ ಪ್ರಕರಣಗಳಲ್ಲಿ ಸಂಬಂಧ ಹೊಂದಿದ್ದಾರೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರೆಟಿಕ್ ರೀಫಾರ್ಮ್ ಎಂಬ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.
ವರದಿಯ ಪ್ರಕಾರ, ಪಕ್ಷವಾರು ಪಟ್ಟಿಯಲ್ಲಿ ಬಿಜೆಪಿಯ 14 ಶಾಸಕರು - ಸಂಸದರಿದ್ದಾರೆ. ಈ ಪಕ್ಷ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಶಿವಸೇನಾ- 7, ತೃಣಮೂಲ ಕಾಂಗ್ರೆಸ್ - 6 ಇವೆ. ಎಲ್ಲಾ ರಾಜ್ಯಗಳ ಒಟ್ಟು 4896 ಶಾಸಕರಲ್ಲಿ 4078 ಹಾಗೂ 776 ಸಂಸದರಲ್ಲಿ, 774 ನಾಯಕರ ಚುನಾವಣಾ ಪ್ರಮಾಣ ಪತ್ರಗಳನ್ನು ವಿಶ್ಲೇಷಣೆಗೊಳಪಡಿಸಿ ವರದಿ ತಯಾರಿಸಲಾಗಿದೆ.
Comments