ಹಿಟ್& ರನ್: ಬೈಕ್ ಗೆ ಡಿಕ್ಕಿ ಹೊಡೆದು ಓಡಿ ಹೋದ ಕಾಂಗ್ರೆಸ್ ಶಾಸಕ ಕಾಶಪ್ಪನವರ್
ಚಿಕ್ಕಮಂಗಳೂರು: ಹಿಟ್ ಆಂಡ್ ರನ್ ಆರೋಪದಲ್ಲಿ ಹುನಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮೇಲೆ ಮತ್ತೊಂದು ಆರೋಪ ಕೇಳಿ ಬಂದಿದೆ. ಹಿಟ್ ಆಂಡ್ ರನ್ ಮಾಡಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಚಿಕ್ಕಮಂಗಳೂರು: ಹಿಟ್ ಆಂಡ್ ರನ್ ಆರೋಪದಲ್ಲಿ ಹುನಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮೇಲೆ ಮತ್ತೊಂದು ಆರೋಪ ಕೇಳಿ ಬಂದಿದೆ. ಹಿಟ್ ಆಂಡ್ ರನ್ ಮಾಡಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಶನಿವಾರ ರಾತ್ರಿ ಯುವಕರು ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮೂಡಿಗೆರೆಯ ಕಬ್ಬಿಣ ಸೇತುವೆ ಬಳಿ ಶಾಸಕರ ಕಾರು ಬೈಕ್ ಗೆ ಗುದ್ದಿದೆ. ಈ ವೇಳೆ ಬೈಕ್ ಸಂಪೂರ್ಣ ಜಖಂಗೊಂಡಿದೆ.ಆದ್ರೆ ಸೌಜನ್ಯಕ್ಕೂ ಶಾಸಕರು ನಿಲ್ಲಸದೇ ಪರಾರಿಯಾಗಿದ್ದಾರೆ. ಬೈಕ್ ನಲ್ಲಿದ್ದ ಬೇರೆ ಯುವಕರು 10 ಕಿ.ಮೀ ದೂರದಲ್ಲಿ ಕಾಶಪ್ಪನವರ್ ಅವರ ಕಾರನ್ನು ತಡೆದಿದ್ದಾರೆ.
ಈ ವೇಳೆ ಸ್ಥಳಕ್ಕೆ ಪೊಲೀಸರು ಕೂಡ ಆಗಮಿಸಿದ್ದರು. ನಾನು ಎಸಿ ಹಾಕಿದ್ದೆ ಬೈಕ್ ಗೆ ಡಿಕ್ಕಿಯಾಗಿದ್ದು ಗಮನಿಸಲಿಲ್ಲ ಎಂದು ಶಾಸಕರು ಉಡಾಫೆ ಉತ್ತರ ನೀಡಿದ್ದಾರೆ. ವಿಜಯಾನಂದ ಕಾಶಪ್ಪನವರೇ ತಮ್ಮ ಕಾರನ್ನು ಚಲಾಯಿಸುತ್ತಿದ್ದರು. ಕುಟುಂಬ ಸದಸ್ಯರೊಂದಿಗೆ ಧರ್ಮಸ್ಥಳಕ್ಕೆ ಯಾತ್ರೆಗಾಗಿ ತೆರಳುತ್ತಿದ್ದರು ಎನ್ನಲಾಗಿದೆ.ಈ ವೇಳೆ ಕಾಂಗ್ರೆಸ್ ಶಾಸಕ ಹಾಗೂ ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಶಾಸಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಕೂಡ ನಡೀತು.
Comments