ಸುಶೀಲ್ ಮೋದಿ ಮೇಲೆ ಹಲ್ಲೆಗೆ ಯತ್ನ

ಬಿಹಾರದಲ್ಲಿ ವೈಶಾಲಿ ಎಂಬಲ್ಲಿ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ಹಲ್ಲೆಗೆ ಯತ್ನಿಸಿದ ವೇಳೆ ಸುಶೀಲ್ ಮೋದಿಗೆ ಯಾವುದೇ ಅಪಾಯವಾಗಿಲ್ಲ, ಅವರು ಸುರಕ್ಷಿತವಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಹಲ್ಲೆ ವೇಳೆ ಸುಶೀಲ್ ಮೋದಿ ಅವರ ಕಾರು ಜಖಂಗೊಂಡಿದ್ದು, ಆರ್ ಜೆಡಿ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿರುವುದರ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆರ್ ಜೆಡಿ ಮೇಲೆ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಯಾದವ್ ತಮ್ಮ ಬೆಂಬಲಿಗರನ್ನು ಶಾಂತಿ ಯಿಂದ ಇರುವಂತೆ ಕೋರಿದ್ದಾರೆ. ಅಲ್ಲದೇ ಇದೇ ವೇಳೆ ಟ್ವಿಟರ್ ನಲ್ಲಿ ಆರ್ ಜೆಡಿ ತುಂಬಾ ಹತಾಶೆಯಿಂದ ವರ್ತಿಸುತ್ತಿದೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ರಾಜಕೀಯದಲ್ಲಿ ಜೆಡಿಯು -ಬಿಜೆಪಿ ಸರ್ಕಾರ ರಚನೆಯಾಗಿದೆ. ಮಹಾ ಮೈತ್ರಿ ಇಬ್ಬರ ಮಧ್ಯೆ ಏರ್ಪಟ್ಟಿದ್ದು ನಿಮಗೆಲ್ಲಾ ಗೊತ್ತು. ಮಹಾ ಮೈತ್ರಿ ಮುರಿಯಲು ಸುಶೀಲ್ ಮೋದಿ ಅವರ ಪಾತ್ರ ಸಾಕಷ್ಟಿದೆ. ಲಾಲು ಯಾದವ್ ಕುಟುಂಬದ ಮೇಲೆ ನಿರಂತರವಾಗಿ ಭ್ರಷ್ಟಾಚಾರ ಆರೋಪ ಮಾಡಿದ್ದ ಸುಶೀಲ್ ಮೋದಿ ಅವರು, ಆಬಳಿಕ ಇಡಿ ಹಾಗೂ ಸಿಬಿಐ ಲಾಲು ಪ್ರಸಾದ್ ಯಾದವ್ ನಿವಾಸದ ಮೇಲೆ ದಾಳಿ ಮಾಡಿತ್ತು. ಇದರಿಂದ ನಿತೀಶ್ ಕುಮಾರ್ ಹಾಗೂ ಆರ್ ಜೆಡಿ ಲಾಲು ಪ್ರಸಾದ್ ಯಾದವ್ ಮಧ್ಯೆ ಮೈತ್ರಿ ಅಂತ್ಯಗೊಂಡಿತ್ತು.
Comments