ಏಳನೇ ಮಹಡಿಯಿಂದ ಜಿಗಿದು ಬೆಂಗಳೂರಿನ ಎಂಟೆಕ್ ವಿದ್ಯಾರ್ಥಿ ಆತ್ಮಹತ್ಯೆ
ಬೆಂಗಳೂರು, ಆಗಸ್ಟ್ 11: ಮಂಗಳೂರಿನ ಆಳ್ವಾಸ್ ನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಕಾವ್ಯಾ ಆತ್ಮಹತ್ಯೆ ಪ್ರಕರಣವೇ ಇನ್ನೂ ಆರದಿರುವಾಗ ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯ ಐಐಟಿ ಕಾಲೇಜಿನಲ್ಲಿ ಮತ್ತೊಂದು ಆತ್ಮಹತ್ಯೆ ಪ್ರಕರಣ ನಡೆದಿದೆ,ಆಂಧ್ರ ಮೂಲದ ಸಾಯಿ ಶರತ್(22) ಎಂಬ ಯುವಕ ಇಂದು(ಆಗಸ್ಟ್ 11) ಬೆಳಿಗ್ಗೆ ಇಲೆಕ್ಟ್ರಾನಿಕ್ ಸಿಟಿಯ ಐಐಟಿ ಕಾಲೇಜಿನ ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಂಟೆಕ್ ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿದ್ದ ಈತನ ಸಾವಿಗೆ ಕಾರಣವಿನ್ನೂ ತಿಳಿದುಬಂದಿಲ್ಲ.
ಇಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Comments