ಬುದ್ಧಿ ಹೇಳಿದ್ದಕ್ಕೆ ತಂದೆಯನ್ನೇ ಕೊಂದ ಮಗ

ಲಖನೌ: ಗಣಿತದ ಕಡೆ ಹೆಚ್ಚು ಗಮನ ಹರಿಸುವಂತೆ ಬುದ್ಧಿವಾದ ಹೇಳಿದ್ದೇ ಇಲ್ಲಿ ತಪ್ಪಾಗಿ ಹೋಗಿದೆ. ಬುದ್ಧಿವಾದ ಹೇಳಿದ ಅಪ್ಪನನ್ನೇ ಮಗನೊಬ್ಬ ಗುಂಡಿಕ್ಕಿ ಕೊಂದಿರುವ ಘಟನೆ ಅಲಹಾಬಾದಿನ ಧೂಮನ್ ಗಂಜ್ ಪ್ರದೇಶದಲ್ಲಿ ನಡೆದಿದೆ. ಮೃತ ತಂದೆ ಮೋತಿಲಾಲ್ ಎಂದು ತಿಳಿದು ಬಂದಿದ್ದು, ಇವರು ವೃತ್ತಿಯಲ್ಲಿ ಉತ್ತರಪ್ರದೇಶದಲ್ಲಿ ಪೇದೆ ಯಾಗಿದ್ದರು ಎನ್ನಲಾಗಿದೆ.
ಮೋತಿಲಾಲ ಪುತ್ರ 10ನೇ ತರಗತಿ ಓಡುತ್ತಿದ್ದ. ತಂದೆಗೆ ಮಗ ಎಂಜಿನಿಯರ್ ಆಗಬೇಕು ಎಂಬ ಕನಸಿತ್ತು. ಆದರೆ ಮಗ ಗಣಿತದಲ್ಲಿ ಕಡಿಮೆ ಅಂಕ ಪಡೆದಿದ್ದ. ಆದ ಕಾರಣ ತಂದೆ ಮಗನಿಗೆ ಗಣಿತದ ಕಡೆಗೆ ನಿಗಾ ವಹಿಸಬೇಕೆಂದು ಬೈದಿದ್ದರು. ತಂದೆಯ ಮಾತಿನಿಂದ ಸಿಟ್ಟಿಗೆದ್ದ ಮಗ ರಾತ್ರಿ ತಂದೆ ಮಲಗಿದ್ದ ವೇಳೆ ತಂದೆಯನ್ನೇ ಗುಂಡಿಕ್ಕಿ ಕೊಂದಿದ್ದಾನೆ. ಮಗನ ಈ ಕೃತ್ಯವನ್ನು ತಾಮಿ ಮತ್ತು ಸಹೋದರಿ ಮುಚ್ಚಿಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈಗಾಗ್ಲೇ ತನಿಖೆ ಕೈಗೊಳ್ಳಲಾಗಿದೆ. ಘಟನೆ ಮುಚ್ಚಿಟ್ಟ ತಾಯಿ ಹಾಗೂ ಸಹೋದರಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಲಹಾಬಾದಿನ ಹಿರಿಯ ಪೊಲೀಸ್ ತಿಳಿಸಿದ್ದಾರೆ.
Comments