ಉಗ್ರ ಸಂಘಟನೆ ಅಲ್ ಖೈದಾ ಪ್ರವೇಶ?
ನವದೆಹಲಿ: ಲಷ್ಕರ್ ಎ ತೊಯ್ಬಾ, ಜೈಷ್ ಎ ಮೊಹಮ್ಮದ್ , ಹಿಜ್ಬುಲ್ ಮುಜಾಹಿದ್ದೀನ್ ಸೇರಿದಂತೆಹಲವು ಉಗ್ರ ಸಂಘಟನೆಗಳು ಆಡುಂಬೊಲವಾಗಿರುವ ಕಾಶ್ಮೀರಕ್ಕೆ ಇದೀಗ ಅಂತರಾಷ್ಟ್ರೀಯ ಉಗ್ರ ಸಂಘಟನೆ ಅಲ್ ಖೈದಾ ಪ್ರವೇಶವಾಗಿರುವಂತಿದೆ. ಆಗಸ್ಟ್ 1ರಂದು ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಅಬು ದುಜಾನಾ ಹಾಗೂ ಆರೀಫ್ ಲೆಲ್ಹಾರಿ ಎಂಬ ಉಗ್ರರು ಲಷ್ಕರ್ ಎ ತೊಯ್ಬಾ ಸಂಘಟನೆಯ ಕಮಾಂಡರ್ ಗಳು ಅಲ್ಲ. ಅವರಿಬ್ಬರು ಅಲ್ ಖೈದಾ ಸಂಘಟನೆಯವರು, ಇದರೊಂದಿಗೆ ದೇಶದಲ್ಲಿ ಅಲ್ ಖೈದಾ ಉಗ್ರರ ಮೊದಲ ಬಲಿ ಆದಂತಾಗಿದೆ ಎಂಬ ಸುದ್ದಿ ಕಾಶ್ಮೀರದಲ್ಲಿ ಹರಡಿದ್ದು, ತನ್ನ ಶವದ ಮೇಲೆ ಪಾಕ್ ಧ್ವಜ ಹೊದಿಸಬೇಡಿ, ಅಲ್ ಖೈದಾ ಧ್ವಜ ಹೊದಿಸಿ ಎಂದು ಆರೀಫ್ ಹೇಳಿಕೊಂಡಿರುವ ಆಡಿಯೋ ಹರಿದಾಡುತ್ತಿದೆ.
Comments