ಚೋಟಾ ರಾಜನ್ ಸಹಚರ ಬಂಧನ

ಉಳ್ಳಾಲ: ಭೂಗತ ಪಾತಕಿ ಚೋಟಾ ರಾಜನ್ ಸಹಚರ ವಿನೇಶ್ ಶೆಟ್ಟಿ ಎಂಬಾತನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಜೋಡಿ ಕೊಲೆ ಪ್ರಕರಣದ ಆರೋಪಿಯಾಗಿದ್ದ ವಿನೇಶ ಶೆಟ್ಟಿ ಜಾಮೀನಿನ ಮೇಲೆ ಬಿಡುಗಡೆಗೊಂಡ ವಿಚಾರಣೆಗೆ ಹಾಜರಾಗದೆ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ.
ಕೊಣಾಜೆ ಪೊಲೀಸರು ಮುಂಬೈ ನಲ್ಲಿ ಆತನನ್ನು ವಶಕ್ಕೆ ಪಡೆದಿದ್ದಾರೆ. ವಿನೇಶ್ ಉಡುಪಿಯ ಶಿರ್ವ ನಿವಾಸಿ. 2003ರಲ್ಲಿ ಕಪ್ಪು ಕಲ್ಲು ಕೋರೆ ವೇಣುಗೋಪಾಲ ನಾಯಕ್ ಮತ್ತು ಅವರ ಚಾಲಕ ಸಂತೋಷ ಎಂಬುವರನ್ನು ಮುಡಿಪು ಇರಾ ಕ್ರಾಸ್ ಸಮೀಪ ಕೊಲೆಗೈಯ್ಯಲಾಗಿತ್ತು. ಪ್ರಕರಣ ಸಂಬಂಧ ಒಬ್ಬ ಮಹಿಳೆ ಸೇರಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.
ಈ ಪ್ರಕರಣದ ಜಾಮೀನು ಪಡೆದಿದ್ದ ಆರೋಪಿ 2015ರವರೆಗೂ ವಿಚಾರಣೆಗೆ ಹಾಜರಾಗುತ್ತಿದ್ದ. ಬಳಿಕ ತಲೆಮರೆಸಿಕೊಂಡಿದ್ದವಿನೇಶ್ ವಿರುದ್ಧ ವಾರಂಟ್ ಜಾರಿಯಾಗಿತ್ತು. ವಿನೇಶ್ ವಿರುದ್ಧ ಮುಂಬೈ, ದಾವಣಗೆರೆ, ಪುಣೆ, ಹೈದ್ರಾಬಾದ್ , ಮಂಗಳೂರಿನಲ್ಲಿ ಕೊಲೆ ಅಕ್ರಮ ಶಸ್ತ್ರಾಸ್ತ್ರ ಸಾಗಣೆ ಕೊಲೆ, ಕೊಲೆಯತ್ನ ಸೇರಿದಂತೆ ಹಲವು ಪ್ರಕರಣಗಳಿವೆ.
Comments