ಕಟ್ಟಡ ಕುಸಿದು ೫ ಸಾವು, ಹಲವರಿಗೆ ಗಾಯ

ಮುಂಬೈ: ನಾಲ್ಕು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ 5 ಮಂದಿ ಸಾವನ್ನಪ್ಪಿದ್ದು, 8 ಮಂದಿಗೆ ಗಾಯಗಳಾದ ಘಟನೆಇಲ್ಲಿ ಮುಂಬೈನ ಘೊಟಕ್ ಪುರದಲ್ಲಿ ನಡೆದಿದೆ.
ಈ ಘಟನೆ ಘೊಟಕ್ ಪುರದ ದಾಮೋದರ್ ಪಾರ್ಕ್ ಪ್ರದೇಶದಲ್ಲಿಬೆಳಿಗ್ಗೆ 10.30ರ ಸುಮಾರಿಗೆ ನಡೆದಿದ್ದು, ಈಗಾಗ್ಲೇ 12 ಮಂದಿಯನ್ನು ಅಪಾಯದಿಂದ ಪಾರು ಮಾಡಲಾಗಿದೆ. ಬಿಎಂಸಿಮೇಯರ್ ೮ ಮಂದಿ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ 108 ಆಂಬುಲೈನ್ಸ್ ಕೂಡ ಘಟನಾ ಸ್ಥಳಕ್ಕೆ ಭೇಟಿನೀಡಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಕುಸಿದ ಬಿದ್ದ ಪರಿಣಾಮ ಕಟ್ಟಡ ಸಂಪೂರ್ಣ ನೆಲ ಸಮವಾಗಿದೆ.
ಸುಮಾರು 30 ಅಡಿ ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆ ರಹಾಂಗ್ಡೇಲೆ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.ಈ ಕಟ್ಟಡದಲ್ಲಿ ನರ್ಸಿಂಗ್ ಹೋಮ್ ಕೂಡ ಇದ್ದು, ಸದ್ಯ ಅದನ್ನು ರಿಪೇರಿ ಮಾಡಲಾಗುತ್ತಿತ್ತು. ಹೀಗಾಗಿ ಹೆಚ್ಚಿನ ಸಂಖ್ಯೆರೋಗಿಗಳು ಅದರಲ್ಲಿ ಇರಲಿಲ್ಲ. ದೊಡ್ಡ ಮಟ್ಟದ ದುರಂತವೊಂದು ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾಕಾರ್ಯಚಾರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
Comments