ರಕ್ತದ ಮಡುವಿನಲ್ಲಿ ಬಿದ್ದಿದ್ದ ಟೆಕ್ಕಿಯನ್ನು ರಕ್ಷಿಸುವ ಬದಲು ಫೊಟೋ ಕ್ಲಿಕ್ಕಿಸಿದರು!!
ಪುಣೆ: ರಸ್ತೆ ಅಪಘಾತಕ್ಕೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ರಕ್ಷಿಸುವ ಬದಲು ಅಲ್ಲಿದ್ದ ಜನರು ಫೊಟೋ ಕ್ಲಿಕ್ಕಿಸಿದರು. ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.
ಇಂದ್ರಯಾಣಿ ಕಾರ್ನರ್ 25 ಹರೆಯದ ಐಟಿ ಇಂಜಿನಿಯರ್ ಸತೀಶ್ ಪ್ರಭಾಕರ್ ಮೆಟಿ ಎಂಬುವವರ ಬೈಕ್ ಗೆ ವಾಹನವೊಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಅಪಘಾತ ಸ್ಥಳದಲ್ಲಿ ಸತೀಶ್ ಸುಮಾರು 25ರಿಂದ 30 ನಿಮಿಷ ನಿಮಿಷಗಳ ಕಾಲ ಬಿದ್ದು ಒದ್ದಾಡಿದರು, ಅಲ್ಲಿದ್ದ ಯಾರೊಬ್ಬರು ಸಹಾಯಕ್ಕೆ ಬರಲಿಲ್ಲ.ರಸ್ತೆ ಬದಿಯಲ್ಲಿ ಮೂಕ ಪ್ರೇಕ್ಷರಂತೆ ನಿಂತಿದ್ದ ಜನರು ಸತೀಶ್ ಒದ್ದಾಡಿದರೂ ಮೊಬೈಲ ಕ್ಯಾಮರಾದಲ್ಲಿ ಸೆರೆ ಹಿಡಿಯುವುದರಲ್ಲಿ ಮಗ್ನರಾಗಿದ್ದರು. ಅದೇ ದಾರಿಯಲ್ಲಿ ಬರುತ್ತಿದ್ದ ದಂತ ವೈದ್ಯರೊಬ್ಬರು ಸತೀಶ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಸತೀಶ್ ಸಾವನ್ನಪ್ಪಿದ್ದರು. ಮೋಶಿ ನಿವಾಸದ ಸತೀಶ್ ತಮ್ಮ ಗೆಳೆಯರನ್ನು ಭೇಟಿ ಮಾಡಿ ಸಂಜೆ 6.30 ಮನೆಗೆ ಮರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
Comments