ಶೂಟಿಂಗ್ ನಲ್ಲಿ ಅಪಘಾತ

ಮುಂಬೈ: ಶೂಟಿಂಗ್ ವೇಳೆ ನಡೆದ ಅಪಘಾತದಲ್ಲಿ ಬಾಲಿವುಡ್ ನಟಿ ಕಂಗನಾ ರನೌತ್ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ಖಲಾಗಿದ್ದಾರೆ. ಕತ್ತಿ ವರಸೆ ದೃಶ್ಯದ ಶೂಟಿಂಗ್ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಹೈದರಾಬಾದ್ ನಲ್ಲಿ ತಮ್ಮ ಮಹತ್ವಾಕಾಂಕ್ಷಿ ಐತಿಹಾಸಿಕ ಚಿತ್ರ ‘ಮಣಿಕರ್ಣಿಕಾ: ದ ಕ್ವೀನ್ ಆಫ್ ಝಾನ್ಸಿ’ ಚಿತ್ರದ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ.
ಕತ್ತಿ ವರಸೆ ದೃಶ್ಯದ ಶೂಟಿಂಗ್ ನಡೆಯುತ್ತಿದ್ದಾಗ ಅಕಸ್ಮಾತ್ತಾಗಿ ಖಡ್ಗ ಕಂಗನಾ ಹಣೆಗೆ ತಾಗಿದೆ. ಇದರಿಂದ ತೀವ್ರ ರಕ್ತ ಸ್ರಾವಕ್ಕೊಳಗಾದ ನಟಿಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಕೆಯನ್ನು ಪರೀಕ್ಷಿಸಿದ ವೈದ್ಯರು ಕೂದಲೆಳೆಯಲ್ಲಿ ನಟಿ ಮಾರಣಾಂತಿಕ ಗಾಯದಿಂದ ಪಾರಾಗಿದ್ದಾರೆ ಎಂದಿದ್ದಾರೆ. ಇದೀಗ ಗಾಯಕ್ಕೆ 15 ಸ್ಟಿಚ್ ಕಲಾಗಿದ್ದು, ಕೆಲವು ದಿನಗಳ ಕಾಲ ಕಂಗನಾ ವಿಶ್ರಾಂತಿ ಪಡೆಯಬೇಕಾಗುತ್ತದೆ ಎಂದು ವೈದ್ಯರು ಸೂಚಿಸಿದ್ದಾರೆ.
Comments