ಪ್ರಾಮಾಣಿಕ ಪತಿಗೆ ಪತ್ನಿಯಿಂದ ಚೀಟಿಂಗ್!

ಪ್ರಾಮಾಣಿಕ ಪತಿಗೆ ಮೋಸ ಮಾಡಿದ ಪತ್ನಿಯೊಬ್ಬಳು ಭಾರೀ ದಂಡ ತೆತ್ತಿದ್ದಾಳೆ. ಪ್ರಿಯಕರನ ಜತೆಗೆ ವಾಸವಿದ್ದ ಮಹಿಳೆಯೊಬ್ಬಳು ತನ್ನ ಮಗಳನ್ನು ಕೂಡ ಜತೆಗೆ ಇಟ್ಟುಕೊಳ್ಳುವಂತೆ ಹಠ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಪ್ರಿಯಕರ ಈಕೆಯ ಜತೆಗೆ ಜಗಳವಾಡಿಕೊಂಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ಮಧ್ಯೆ ಜಗಳ ಏರ್ಪಟ್ಟಿದೆ. ಈ ವೇಳೆ ಒಬ್ಬರನೊಬ್ಬರು ಹಲ್ಲೆ ಮಾಡಿಕೊಂಡಿದ್ದಾರೆ. ಮಹಿಳೆಯನ್ನು ಮನಸ್ಸೋ ಇಚ್ಚೆ ಥಳಿಸಿದ ಪ್ರಿಯಕರ ಆಕೆ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆ. ತನ್ನ ಪ್ರಿಯತಮೆಯು ಸಾವನ್ನಪ್ಪಿರಬಹುದು ಎಂದು ಅರಿತ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಆದ್ರೆ ಮಹಿಳೆ ಜೀವಂತವಾಗಿದ್ದಳು. ತನ್ನ ಪ್ರಿಯಕರನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಿಸಿದ್ದಾಳೆ. ಅಂದ್ಹಾಗೆ, ಹಲ್ಲೆಗೊಳಗಾದ ಮಹಿಳೆ ನೇಪಾಳಿ ಮೂಲದವಳು ಎಂದು ತಿಳಿದು ಬಂದಿದೆ. ಈಕೆಯ ಪತಿ ಚೈನ್ನೈ ಯಲ್ಲಿ ನೌಕರಿ ಮಾಡುತ್ತಿದ್ದ. ಪತಿಯ ಜತೆಗೆ ಸಂಸಾರ ಮಾಡದೇ ಈ ಮಹಿಳೆ ತನ್ನ ಪ್ರಿಯಕರನ ಜತೆಗೆ ಓಡಿ ಬಂದಿದ್ದಳು. ಆದ್ರೆ ಪತಿಯನ್ನು ತ್ಯಜಿಸಿ ಪ್ರಿಯಕರನನ್ನು ನಂಬಿಕೊಂಡ ಬಂದ ಮಹಿಳೆ ಈಗ ಮೋಸಕ್ಕೆ ಒಳಗಾಗಿದ್ದಾಳೆ.
Comments