75 ವರ್ಷಗಳ ಬಳಿಕ ದೊರೆತ ಮೃತದೇಹ
ಸ್ವಿಟ್ಜರ್ಲ್ಯಾಂಡ್ : ಸ್ವಿಟ್ಜರ್ಲ್ಯಾಂಡ್ ನ ಹಿಮನದಿಯಲ್ಲಿ 75ವರ್ಷಗಳ ಹಿಂದೆ ಸಾವನ್ನಪ್ಪಿದ್ದ ಜೋಡಿಯ ಮೃತದೇಹ ಪತ್ತೆಯಾಗಿದೆ.
ಈ ಜೋಡಿ 1942ರಲ್ಲಿ ಕಾಣೆಯಾಗಿದ್ದರು ಹಸುಗಳನ್ನು ಹುಡುಕಿಕೊಂಡು ಹೋಗಿದ್ದ ಮಾರ್ಸೆಲಿನ್ ಮತ್ತು ಫ್ರಾನ್ಸಿನ್ ಡಮೌಲಿನ್ ಜೋಡಿ ಕಣ್ಮರೆಯಾಗಿದ್ದರು. ಇವರಿಗೆ ೭ ಮಕ್ಕಳಿದ್ದು,ಇವರನ್ನು ಪತ್ತೆ ಹಚ್ಚಿಕೊಂಡುವಂತೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಸತತ 75 ವರ್ಷಗಳ ಕಾಲ ಆ ಕುಟುಂಬ ಬರುವಿಕೆಗಾಗಿ ಕಾಯುತ್ತಿದ್ದರು ಆದರೆ ನಾಪತ್ತೆಯಾಗಿದ್ದ ಮಾರ್ಸೆಲಿನ್ ಫ್ರಾನ್ಸಿನ್ ಶವವಾಗಿ ಪತ್ತೆಯಾಗಿದ್ದಾರೆ. ಇಲ್ಲಿಯ ಸ್ಥಳೀಯ ಶವಗಳು ದೊರೆತ್ತಿರುವುದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತನಿಖೆ ಕೈಗೊಂಡಿದ್ದ ಪೊಲೀಸರು ಡಮೌಲಿನ್ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿದ್ದಾರೆ. ಇದು ನಮ್ಮಿಂದ ನಂಬುವುದಕ್ಕೂ ಸಾಧ್ಯವಾಗಿಲ್ಲ, ಅಂದು ಕಳೆದು ಹೋಗಿದ್ದ ನಮ್ಮ ತಂದೆ- ತಾಮಿ ದೊರೆತಿದ್ದಾರೆ. ನಮಗೆ ಬೇಸರವಾಗಿದೆ ಎಂದು ಕಿರಿಯ ಪುತ್ರಿ ಹೇಳಿದ್ದಾರೆ.
Comments