ಬಡವರಿಗಾಗಿ ನಟಿ ಲೀಲಾವತಿ ನಿರ್ಮಿಸಿದ್ದ ಆಸ್ಪತ್ರೆ ದುಷ್ಕರ್ಮಿಗಳಿಂದ ಧ್ವಂಸ
ಬೆಂಗಳೂರು : ಬಡವರಿಗೆ ಅನುಕೂಲವಾಗಲೆಂದು ಹಿರಿಯ ನಟಿ ಲೀಲಾವತಿ ಅವರು ನಿರ್ಮಿಸಿದ್ದ ಆಸ್ಪತ್ರೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ.
ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಲೀಲಾವತಿ ಅವರು ನಿರ್ಮಿಸಿದ್ದ ಆಸ್ಪತ್ರೆಯ ಪೀಠೋಪಕರಣ, ಔಷಧಿಗಳನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದು, ಮೇಲ್ಛಾವಣಿಗೂ ಹಾನಿ ಮಾಡಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಲೀಲಾವತಿ ಮತ್ತು ಅವರ ಪುತ್ರ ವಿನೋದ್ ರಾಜ್ ದುಷ್ಕರ್ಮಿಗಳ ಕೃತ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಐದು ವರ್ಷದ ಹಿಂದೆ ಗ್ರಾಮಾಂತರ ಪ್ರದೇಶದ ಹಳ್ಳಿಗಾಡಿನ ಬಡವರ ಅನುಕೂಲಕ್ಕಾಗಿ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಆಸ್ಪತ್ರೆ ನಿರ್ಮಿಸಿ ಸರ್ಕಾರದ ಸುಪರ್ದಿಗೆ ನೀಡಿದ್ದರು.
Comments