ಭೂತ - ಪ್ರೇತದ ಹೆಸರಲ್ಲಿ ನಡೀತು ಹತ್ಯೆ !!
ಉತ್ತರಪ್ರದೇಶದ ಸೋನಾಭದ್ರ ಜಿಲ್ಲೆಯಲ್ಲಿ ಭೂತ - ಪ್ರೇತದ ಹೆಸರಲ್ಲಿ ಓರ್ವ ಮಹಿಳೆಯ ಹತ್ಯೆ ನಡೆದಿದೆ. ಭೂತದ ಹೆಸರಲ್ಲಿ ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಯನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಮೃತ ಮಹಿಳೆಯ ಪತಿ ಸೇರಿದಂತೆ ಇನ್ನಿತರ ಮೂರು ಮಂದಿ ಮಹಿಳೆಯ ವಿರುದ್ಧ ಹತ್ಯೆ ಆರೋಪ ಕೇಳಿ ಬಂದಿದ್ದು,
ಆರೋಪಿಗಳನ್ನು ಬಂಧಿಸಿ ಕೇಸ್ ದಾಖಲಿಸಲಾಗಿದೆ.
ಮೃತ ಮಹಿಳೆಯ ಪತಿ ಜಯರಾಮ್ ಗ್ರಾಮದ ಕೆಲವರು ಹೇಳಿಕೆ ಪ್ರಕಾರ ಬುಧುವಾರದಂದು ರಾತ್ರಿಯಲ್ಲಿ ಹೆಂಡತಿಯನ್ನು ಕರೆದುಕೊಂಡು ಹೋಗಿ ಪೂಜೆ - ಅರ್ಚನೆ ಗಳನ್ನು ಮುಗಿಸಿಕೊಂಡು ಮರಳುತ್ತಿದ್ದ ವೇಳೆ ರಸ್ತೆ ಮಧ್ಯೆ ಜಯರಾಮ್ ಹೆಂಡತಿ ಫುಲವತಿಯನ್ನು ತಡೆದು ಮೂವರು ಮಹಿಳೆಯರು ಹೊಡೆಯಲು ಆರಂಭಿಸಿದರು. ಈ ಮಧ್ಯೆ ತಲೆಯ ಮೇಲೆ ಬಲವಾದ ಪೆಟ್ಟು ಬಿದ್ದ ಕಾರಣ ಫುಲವತಿ ಸ್ಥಳದದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಬಳಿಕ ಮಹಿಳೆಯ ತಲೆ ಮೇಲೆ ಕಲ್ಲು ಎತ್ತು ಹಾಕಿ ಹತ್ಯೆ ಮಾಡಿದ್ದಾರೆ.
ನಂತರ ಮೃತ ದೇಹವನ್ನು ಸೇತುವೆ ಕೆಳಗೆ ಎಸೆದು ಹೋಗುತ್ತಿದ್ದ ವೇಳೆ ಅದೇ ಗ್ರಾಮದ ಕೆಲ ಮಹಿಳೆಯರು ನೋಡಿದ್ದಾರೆ. ಆರೋಪಿ ಮಹಿಳೆಯರು ಮತ್ತು ಗ್ರಾಮದ ಕೆಲ ಮಹಿಳೆಯರ ಮಧ್ಯೆ ಮಾರಾಮಾರಿ ಏರ್ಪಟ್ಟಿದೆ. ಮಾಹಿತಿ ಮೇರೆಗೆ ಸ್ಥಳಕ್ಕಾಗಿಮಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರ ವಿಟಾರಣೆ ವೇಳೆ ಮೂವರು ಮಹಿಳೆಯರು ಹತ್ಯೆ ಮಾಡಿರುವುದರ ಕುರಿತು ಬಾಯಿ ಬಿಟ್ಟಿದ್ದಾರೆ. ಮೃತ ಮಹಿಳೆಫುಲವತಿ ಭೂತ- ಪ್ರೇತಗಳನ್ನು ಮಾಡಿ ಬಹಳ ಮಂದಿಗೆ ತೊಂದರೆ ನೀಡುತ್ತಿದ್ದಳಂತೆ. ಈ ಬಗ್ಗೆ ಸ್ವಾಮಿಜೀ ಹೇಳಿದ್ದನಂತೆ.
Comments