ಯುವತಿಗಾಗಿ ಉಗ್ರನಾದ ಯುವಕನ ಸ್ಟೋರಿ?

ಶ್ರೀನಗರ : ಯುವತಿಯನ್ನು ವಿವಾಹವಾಗಬೇಕೆಂಬ ಹಠ ದಿಂದ ಯುವಕನೋರ್ವ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಬಗೆಯಿದು. ಉತ್ತರಪ್ರದೇಶ ಮೂಲದ ಉಗ್ರ ಸಂದೀಪ್ ಶರ್ಮಾ ತಾನು ಉಗ್ರನಾದ ಬಗೆಯನ್ನು ಹೇಳಿಕೊಂಡಿದ್ದಾರೆ.
ಜ.1 ರಂದು ಸೇನೆ ನಡೆಸಿದ್ದ ಎನ್ ಕೌಂಟರ್ ನಲ್ಲಿ ಎಲ್ ಇಟಿ ಕಮಾಂಡರ್ ಬಷೀರ್ ಲಷ್ಕರಿಯನ್ನು ಹತ್ಯೆ ಮಾಡಿಲಾಗಿತ್ತು. ಉತ್ತರ ಪ್ರದೇಶದ ನಿವಾಸಿಯಾಗಿರೋ ಸಂದೀಪ್ ಶರ್ಮಾ ಎಂಬಾತ ಬಷೀರ್ ಗೆ ನಿಕಟ ವರ್ತಿಯಾಗಿದ್ದ. ಎನ್ ಕೌಂಟರ್ ವೇಳೆ ಬಷೀರ್ ಅಡಗಿದ್ದ ಮನೆಯಲ್ಲಿಯೇ ಸಂದೀಪ್ ನನ್ನು ಬಂಧನಕ್ಕೊಳಪಡಿಸಲಾಗಿತ್ತು. ಇದೀಗ ಸಂದೀಪ ಶರ್ಮಾರನ್ನು ವಿಚಾರಣೆಗೊಳಪಡಿಸಿರುವ ಯುಪಿ ಉಗ್ರ ನಿಗ್ರಹ ಅಧಿಕಾರಿಗಳು ಹಲವು ಸ್ಫೋಟಕ ಮಾಹಿತಿಗಳನ್ನು ಪಡೆದುಕೊಂಡಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಕಾಶ್ಮೀರಿ ಯುವತಿನೊಂದಿಗೆ ಗಾಢವಾದ ಪ್ರೇಮದ ಬಲೆಯಲ್ಲಿ ಬಿದ್ದಿದ್ದರಿಂದಲೇ ಆಕೆಯ ಷರತ್ತಿನ ಮೇರೆಗೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಎಂದು ಬೆಳಕಿಗೆ ಬಂದಿದೆ.
ಕುಲಾಂನಲ್ಲಿ ಶಸ್ತಾಸ್ತ್ರ ತರಬೇತಿ ಪಡೆದುಕೊಂಡಿದ್ದ ಶರ್ಮಾ ತನ್ನ ಮೂಲ ಹೆಸರಿನಲ್ಲೇ ಚಾಲನಾ ಪರವಾನಗಿಯನ್ನು ಹೊಂದಿದ್ದ ಲಷ್ಕರ್- ಇ-ತೊಯ್ಬಾ ಉಗ್ರ ಸಂಘಟನೆಯ ಶಸ್ತ್ರಾಸ್ತ್ರ ಸಾಗಾಟದ ವಾಹನದಲ್ಲಿ ಚಾಲಕನಾಗಿ ಶರ್ಮಾ ಕಾರ್ಯ ನಿರ್ವಹಿಸುತ್ತಿದ್ದ ಎಂದು ವಿಚಾರಣೆ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಕೆಲಸದ ಜತೆಗೆ ಹಲವಾರು ಕಾಶ್ಮೀರಿ ಯುವತಿಯರೊಂದಿಗೆ ಕಾಲಕಳೆಯುತ್ತಿದ್ದ ಶರ್ಮಾಗೆ ಓರ್ವ ಕಾಶ್ಮೀರಿ ಯುವತಿಯ ಪ್ರೇಮದ ಬಲೆಗೆ ಬಿದ್ದಿದ್ದಾನೆ. ಇದರಂತೆ ಆಕೆಯ ಕುಟುಂಬದವರ ಒತ್ತಾಯಕ್ಕೆ ಮಣಿದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇದಾದ ಬಳಿಕಸಂದೀಪ್ ಶರ್ಮಾ ಹೆಸರನ್ನು ಆದಿಲ್ ಆಗಿ ಮರುನಾಮಕರಣ ಮಾಡಲಾಗಿದೆ.
Comments