ಉಬೇರ್ ಟ್ಯಾಕ್ಸಿಗೆ ಹತ್ತುವುದಕ್ಕೂ ಮುನ್ನ ಎಚ್ಚರ, ಇಲ್ಲಿ ಕಾದಿದೆ ಭಯಾನಕ ಘಟನೆ !!

ನವದೆಹಲಿ: ದೆಹಲಿ ಮೂಲದ ಪತ್ರಕರ್ತೆಯೊಬ್ಬರಿಗೆ ಭಯಾನಕ ಘಟನೆಯ ಅನುಭವವಾಗಿದೆ. ಈ ಘಟನೆಯಿಂದ ಅವರು ಬೆಚ್ಚಿ ಬಿದ್ದಿದ್ದಾರೆ. ಮಂಗಳವಾರ 10.55ರಸುಮಾರಿಗೆ ಮನೆಗೆ ಹೊರಡಲು ಉಬೇರ್ ಕ್ಯಾಬ್ ಅನ್ನು ಬುಕ್ ಮಾಡಿದ್ದಾರೆ. ಆದರೆ ಚಾಲಕನು ದೆಹಲಿ ನೋಯ್ಡಾ ಎಕ್ಸ್ಪ್ರಸ್ ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ಕಾರನ್ನು ನಿಲ್ಲಿಸಿದ್ದಾನೆ. ಬಳಿಕ ಸ್ನೇಹಿತರನ್ನು ಕರೆ ಮಾಡಿ ಬರುವಂತೆ ತಿಳಿಸಿದ್ದಾನೆ.
ಈ ವೇಳೆ ಏನು ಮಾಡಬೇಕು ಎನ್ನವುದನ್ನು ತೋಚದೆ ಯುವತಿ ಉಬೇರ್ ಅಧಿಕಾರಿಗಳಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಉಬೇರ್ ಮೊಬೈಲ್ ಅಪ್ಲಿಕೇಶನ್ ಮೂಲಕ ಅಧಿಕಾರಿಗಳಿಗೆ ಘಟನೆ ಬಗ್ಗೆ ವಿವರಿಸಿದ್ದಾರೆ. ಆದ್ರೆ ಉಬೇರ ಅಧಿಕಾರಿಗಳ ಬಂದಉತ್ತರ ಎಂಟು ಗಂಟೆಗಳ ಬಳಿಕ. ರಾತ್ರಿ 10.55 ರ ಸುಮಾರಿಗೆ ಉಬೇರ್ ಟ್ಯಾಕ್ಸಿ ಹತ್ತಿದ ನಂತರ ಕಾರಿನಲ್ಲಿ ಅಲ್ಕೋಹಾಲ್ ,ಮದ್ಯದ ಬಾಟಲಿಗಳು ಇರುವುದನ್ನು ಅವರು ಗಮನಿಸಿದ್ದರು.. ಉಬೇರ್ ಕ್ಯಾಬ್ ಡ್ರೈವರ್ ಗೆ ಕಾರು ನಿಲ್ಲಿಸುವಂತೆ ಹೇಳಿದ್ದಾರೆ. ಆದರೆ ಉಬೇರ ಚಾಲಕ ಮಾತ್ರ ಕಾರಿನಲ್ಲಿದ್ದ ಲೈಟ್ ಗಳನ್ನು ಆಫ್ ಮಾಡಿದ್ದಾನೆ, ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದಿರುವ ಅವರು , ಇಂದಿನ ದಿನಗಳಲ್ಲಿ ಒಂಟಿಯಾಗಿ ಮಹಿಳೆಯರು ಉಬೇರ್ ಟ್ಯಾಕ್ಸಿ ಗಳನ್ನು ನಂಬುವಂತಿಲ್ಲ, ಟ್ಯಾಕ್ಸಿಗೆ ಹತ್ತುವುದಕ್ಕೂ ಮುನ್ನ ಎಚ್ಚರವಹಿಸಬೇಕು . ಟ್ಯಾಕ್ಸಿಯಲ್ಲಿ ಪ್ರಯಾಣ ಬೆಳೆಸುವುದು ಸುರಕ್ಷಿತವಲ್ಲ ಎಂದು ತಿಳಿಸಿದ್ದಾರೆ.
Comments