ಊಟ ಬಡಿಸಲು ತಡ ಮಾಡಿದ ಪತ್ನಿಯನ್ನು ಗುಂಡಿಕ್ಕಿ ಕೊಂದ ಪತಿ!!!
ಊಟ ಬಡಿಸಲು ತಡ ಮಾಡಿದ ಪತ್ನಿಯನ್ನು ಪತಿಯೊಬ್ಬ ಕೊಂದು ಹಾಕಿರುವ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ. 55 ವರ್ಷದ
ಸುನೈನಾ ಮೃತಪಟ್ಟ ಮಹಿಳೆಯಾಗಿದ್ದಾರೆ. ಪತ್ನಿ ಸುನೈನಾ ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಅವರು
ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಟ್ರಕ್ ಚಾಲಕನಾಗಿರುವ ಅಶೋಕ ಶನಿವಾರ ರಾತ್ರಿ ಮನೆಗೆ ಬಂದ ಬಳಿಕ ಮದ್ಯಪಾನ ಮಾಡಿದ್ದಾರೆ. ರಾತ್ರಿ 11 ಗಂಟೆ ಸುಮಾರಿಗೆ
ಊಟ ಬಡಿಸುವಂತೆ ಪತ್ನಿಯನ್ನು ತಿಳಿಸಿದ್ದಾರೆ. ಆದರೆ ಊಟ ಬಡಿಸಲು ತಡ ಮಾಡಿದ್ದಕ್ಕೆ ಪತ್ನಿ ಜೊತೆಗೆ ಜಗಳ ತೆಗೆದಿದ್ದು. ನಂತರ
ಪಿಸ್ತೂಲ್ ನಿಂದ ಸುನೈನಾ ಅವರ ತಲೆಗೆ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Comments