ದುರಂತಕ್ಕೂ ಮುನ್ನ FBಯಲ್ಲಿ ಲೈವ್
11 ಯುವಕರು ತಂಡ ಜಾಲಿ ರೈಡ್ ಗೆಂದು ವೇನಾ ಜಲಾಶಯಕ್ಕೆ ಬಂದಿದ್ರು
ನಾಗ್ಪುರ್ : ಮಹಾರಾಷ್ಟ್ರ ನಾಗ್ಪುರದಲ್ಲಿ ದೋಣಿ ದುರಂತ ಸಂಭವಿಸಿ 8 ಯುವಕರು ನೀರು ಪಾಲಾಗಿರುವ ಘಟನೆ ವರದಿಯಾಗಿದೆ.
ವೇನಾ ಜಲಾಶಯದಲ್ಲಿ ಈ ಘಟನೆ ಸಂಭವಿಸಿದ್ದು, ನಾಗ್ಪುರದಲ್ಲಿ 25 ಕಿ.ಮೀ ದೂರದಲ್ಲಿರುವ ಜಲಾಶಯದಲ್ಲಿ 11 ಯುವಕರು ತಂಡ
ಜಾಲಿ ರೈಡ್ ಗೆಂದು ವೇನಾ ಜಲಾಶಯಕ್ಕೆ ಬಂದಿದ್ರು. ಈ ವೇಳೆ ನೀರಿನಲ್ಲಿ ಇವರಿದ್ದ ದೋಣಿ ಮಗುಚಿ ಬಿದ್ದಿದೆ. ಓರ್ವ ಮೃತಪಟ್ಟಿದ್ದರೆ,
11 ಯವಕರಲ್ಲಿ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಓರ್ವ ಮೃತ ದೇಹ ಪತ್ತೆಯಾಗಿದ್ದು, ಉಳಿದ 7 ಯುವಕರನ್ನು ಶೋಧ ನಡೆಸಲಾಗುತ್ತಿದೆ. ನೀರಿನಲ್ಲಿ ನಾಪತ್ತೆಯಾದವರ ಪತ್ತೆಗಾಗಿ
ಪೊಲೀಸರು ಶೋಧ ನಡೆಸುತ್ತಿದ್ದಾರೆ. ಅಗತ್ಯ ಬಿದ್ದಲ್ಲಿ ಎನ್ ಡಿಆರ್ ಎಫ್ ಸಿಬ್ಬಂದಿಯ ನೆರವು ಪಡೆಯಲಾಗುತ್ತದೆ ಎಂದು ನಾಗ್ಪುರ್
ಎಸ್ ಪಿ ಸುರೇಶ್ ಬೋಯತ್ ತಿಳಿಸಿದ್ದಾರೆ.
Comments