ಬಂಟಾಳ್ವದಲ್ಲಿ ಉದ್ವಿಗ್ನ, ಕರ್ಫ್ಯೂ

10 Jul 2017 10:18 AM | Crime
372 Report

ಬಂಟ್ವಾಳ: ಆರ್ ಎಸ್ ಎಸ್ ಕಾರ್ಯಕರ್ತ ಶರತ್, ಕಲ್ಲಡ್ಕ ಗಲಭೆ ಬಳಿಕ ಬಂಟ್ವಾಳ ತಾಲೂಕಿನಾದ್ಯಂತ ಕರ್ಫ್ಯೂ ಮಾದರಿಯ ಸ್ಥಿತಿನಿರ್ಮಾಣವಾಗಿದೆ. ಕೆಲ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದೆ. ಬಂಟ್ವಳ ಸಹಿತ ವಿವಿಧೆಡೆ 26 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, ವಾಹನಗಳ ಮೇಲೆ ನಿಗಾ ಇರಿಸಲಾಗಿದೆ.

ಅನುಮಾನ ಬಂದ ವಾಹನಗಳನ್ನು ತಪಾಸಣೆ ಪಡೆಯಲಾಗುತ್ತದೆ. ಯಾರೇ ಆಗಲಿ ಪೊಲೀಸರ ಮೇಲೆ ದಾಳಿಗೆ ಮುಂದಾದಲ್ಲಿ ಗುಂಡು ಹಾರಿಸಲಾಗುತ್ತದೆ. ಚೆಕ್ ಪೋಸ್ಟ್ ಗಳ ಬಳಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಗುಂಡು ಹಾರಿಸಲಾಗುತ್ತದೆ. ಚೆಕ್ ಪೋಸ್ಟ್ ಗಳಬಳಿ ತಪ್ಪಿಸಿಕೊಳ್ಳಲು ಯತ್ನಿಸಿದರು ಗುಂಡು ಹಾರಿಸಲು ಕಾನೂನಿನಂತೆ ಪೊಲೀಸರಿಗೆ ಅವಕಾಶ ಕೊಡಲಾಗಿದೆ ಎಂದು ಐಜಿಪಿ ಹರಿಶೇಖರನ್ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು. ಅಹಿತಕರ ವಾತಾವರಣಕ್ಕೆ ಕಾರಣರಾದ 20ಕ್ಕೂ ಅಧಿಕ ಹೆಚ್ಚು ಕಿಡಿಗೇಡಿಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಪೊಲೀಸ್ ವ್ಯಾಪ್ತಿಯಲ್ಲಿ ಮಾತ್ರವಲ್ಲದೆ ಮಂಗಳೂರು ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿಯೂ ವ್ಯಾಪಕ ಪೊಲೀಸ್ಬಂದೋಬಸ್ತ ಏರ್ಪಡಿಸಲಾಗಿದೆ . ಒಟ್ಟು ೩,೦೦೦ಕ್ಕೂ ಮಿಕ್ಕಿ ಪೊಲೀಸರನ್ನು ನಿಯೋಜಿಸಲಾಗಿದೆ.

Edited By

venki swamy

Reported By

Sudha Ujja

Comments