ಪ್ರಾಣಾಪಾಯದಿಂದ ಪಾರಾದ ಫಡ್ನಾವೀಸ್

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಅವಘಡದಿಂದ ಪಾರಾಗಿದ್ದು, ಅಲಿಬಾಗ್ ನಲ್ಲಿ ಫಡ್ನವೀಸ್ ಕ್ಯಾಪ್ಟರ್
ಏರುವಾಗಲೇ ಏಕಾಏಕಿ ಹಾರಾಟ ಆರಂಭವಾದ ಬಗ್ಗೆ ವರದಿಯಾಗಿದೆ. ವರದಿಯಂತೆ, ಹೆಲಿಕ್ಯಾಪ್ಟರ್ ನ ಪಂಕಗಳು ಫಡ್ನವೀಸ್ ರ
ತಲೆಗೆ ತಾಗುವ ಸಾಧ್ಯತೆಗಳಿತ್ತು. ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ. ಲಾತೂರ್ ನಲ್ಲಿ ಮೇ ೨೫ರಂದು
ಫಡ್ನವೀಸ್ ಅವರಿದ್ದ ಹೆಲಿಕ್ಯಾಪ್ಟರ್ ತುರ್ತು ಲ್ಯಾಂಡ್ ಆಗಿ ಅವಘಡಕ್ಕೀಡಾಗಿತ್ತು. ಅವಘಡದಲ್ಲಿ ಕ್ಯಾಪ್ಟರ್ ಸಂಪೂರ್ಣ
ಜಖಂಗೊಂಡಿತ್ತು.
Comments