ಅಮರನಾಥ್ ಯಾತ್ರಿಕರಿಗೆ ಕಂಟಕವಾಯ್ತು ಸಿಲಿಂಡರ್

ಜಮ್ಮು ಶ್ರೀನಗರ ಹೆದ್ದಾರಿಯಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಸ್ಫೋಟಗೊಂಡಿರುವ ಘಟನೆ ವರದಿಯಾಗಿದೆ
ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರಕ್ಕೆ ಅಮರನಾಥ್ ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಗಂಡಾಂತರ ತಂದಿದೆ. ಜಮ್ಮು
ಶ್ರೀನಗರ ಹೆದ್ದಾರಿಯಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಸ್ಫೋಟಗೊಂಡಿರುವ ಘಟನೆ ವರದಿಯಾಗಿದೆ ಈ ಘಟನೆ
ನಡೆದಿದ್ದು,ಈ ವೇಳೆ ಓರ್ವ ಸಾವನ್ನಪ್ಪಿದ್ರೆ, 8 ಜನ ಯಾತ್ರಿಕರಿಗೆ ಗಂಭೀರ ಗಾಯಗಳಾಗಿವೆ. ಮೂಲಗಳ ಪ್ರಕಾರ ಎಲ್ಪಿಜಿ ಸಿಲಿಂಡರ್
ಸ್ಫೋಟದಿಂದಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದಿಂದಾಗಿ ಕೆಲ ಕಾಲ ಗೊಂದಲದ ವಾತಾವರಣ
ನಿರ್ಮಾಣವಾಗಿತ್ತು. ಪ್ರಯಾಣ ಮಾಡುತ್ತಿದ್ದ ಎಲ್ಲಾ ಯಾಂತ್ರಿಕರು ಉತ್ತರ ಪ್ರದೇಶದವರು ಎಂದು ತಿಳಿದು ಬಂದಿದೆ. ಅಡುಗೆ
ತಯಾರಿಸಲು ಎಲ್ಪಿಜಿ ಸಿಲಿಂಡರ್ ನ್ನು ತಮ್ಮ ಜತೆಗೆ ತೆಗೆದುಕೊಂಡು ಹೋಗುತ್ತಿದ್ದರು. ಈಗಾಗ್ಲೇ ಸ್ಥಳಕ್ಕೆ ಜಮ್ಮು ಕಾಶ್ಮೀರ
ಪೊಲೀಸರು ಭೇಟಿ ನೀಡಿದ್ದು, ಘಟನೆ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
Comments