ಮದುವೆಗೆ ಹಣ ನೀಡಲಿಲ್ಲ ಎಂದು ಅಪ್ಪನನ್ನೇ ಕೊಂದ ಮಗ

ಉತ್ತರಪ್ರದೇಶ: ತನ್ನ ಐದನೇ ಮದುವಗೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಅಪ್ಪನನ್ನು ಮಗನೇ ಕೊಂದು ಹಾಕಿರುವ ಘಟನೆ
ಉತ್ತರಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸೀತಾಪುರ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ಅಶೋಕ ಎಂಬಾತನಿಗೆ ಈಗಾಗ್ಲೇ ನಾಲ್ಕು ಬಾರಿ ಮದುವೆಯಾಗಿದೆ. ಐದನೇ ಮದುವೆಗೆ ಈತ
ಸಿದ್ಧತೆ ನಡೆಸಿದ್ದ, ಮದುವೆಗೆ ಹಣ ನೀಡುವ ಸಂಬಂಧ ಅಪ್ಪ-ಮಗನ ಮಧ್ಯೆ ಜಗಳವಾಗಿತ್ತು. ತನ್ನ ತಂದೆಗೆ ಹಣ ನೀಡುವಂತೆ ನಿತ್ಯವು
ಒತ್ತಾಯಿಸುತ್ತಿದ್ದ. ಹಣ ನೀಡಲು ನಿರಾಕರಿಸಿದ ತಂದೆಯನ್ನೇ ಮಗ ಕುಡಿದ ಅಮಲಿನಲ್ಲಿ ಕತ್ತು ಹಿಸುಕಿ ಕೊಂದು ಹಾಕಿದ್ದಾನೆ. ವಿಷ್ಯ
ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿಗಾಗಿ
ಹುಡುಕಾಟ ನಡೆಸಿದ್ದು, ಕುಟುಂಬದವರನ್ನು ವಿಚಾರಣೆ ನಡೆಸುತ್ತಿದ್ದಾರೆ.
Comments