ತಮಿಳುನಾಡಿನ 8 ಮಂದಿ ಮೀನುಗಾರರ ಬಂಧನ

ರಾಮೇಶ್ವರಂ: ದ್ವೀಪರಾಷ್ಟ್ರ ಶ್ರೀಲಂಕಾದ ಪ್ರಾದೇಶಿಕ ಜಲದ ಬಳಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಶ್ರೀಲಂಕಾ
ನೌಕಾಪಡೆ 8 ಮಂದಿ ಮೀನುಗಾರರನ್ನು ಬಂಧಿಸಿದೆ. ಕಳೆದ ರಾತ್ರಿ ಪುದುಕೊಟ್ಟೆ ಎರಡು ದೋಣಿಗಳನ್ನು ನೌಕಾಪಡೆ ಸಿಬ್ಬಂದಿ
ವಶಪಡಿಸಿಕೊಂಡಿದ್ದು ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ.
ಬಂಧಿತ ಮೀನುಗಾರರನ್ನು ಕಾಗೆ ಸಂತುರೈಗೆ ಕರೆದ್ಯೊಯಲಾಗಿದೆ. ಮತ್ತೊಂದು ಘಟನೆಯಲ್ಲಿ ನೆಡುಂಥೆವು ಕರಾವಳಿ ಪ್ರದೇಶದಲ್ಲಿ
ದೋಣಿಯೊಂದು ಮುಳುಗಿ ಅದರಲ್ಲಿದ್ದ ನಾಲ್ವರು ಮೀನುಗಾರರನ್ನು ಮತ್ತೊಂದು ದೋಣಿಯಲ್ಲಿದ್ದ ಮೀನುಗಾರರ ರಕ್ಷಿಸಿ ತೀರಕ್ಕೆ ಕರೆ
ತಂದರು ಎಂದು ಸಹಾಯಕ ನಿರ್ದೇಶಕ ಚಂದ್ರಶೇಖರ್ ತಿಳಿಸಿದ್ದಾರೆ.
Comments