‘ಗೂಗಲ್’ ಗೆ ಪ್ರಶ್ನೆ ಕೇಳಿ ಆತ್ಮಹತ್ಯೆ ಮಾಡಿಕೊಂಡ ಯುವಕ!!!

ಮುಂಬೈ: ಈ ಘಟನೆ ಚಿತ್ರದ ಕಥೆಯಂತೆ ಕಂಡರೂ ವಾಸ್ತವವಾಗಿದೆ. ಪ್ರೀತಿಯಲ್ಲಿ ಬಿದ್ದ ಯುವಕನೋರ್ವ ಗೂಗಲ್ ನಲ್ಲಿ ಸಾಯುವ
ಸುಲಭ ದಾರಿ ಯಾವುದು? ಎಂದು ಪ್ರಶ್ನೆ ಕೇಳಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈಯಲ್ಲಿ ನಡೆದಿದೆ. ಮೂಲಗಳ ಪ್ರಕಾರ, ಮುಂಬೈ ಮೂಲದಪವನ್ ಜೀತ್ ಕೊಹ್ಲಿ ಎಂಬ ಯುವಕ ಆತ್ಮಹತ್ಯೆ ಮಾಡಿಕೊಳ್ಳುವುದರ ಕುರಿತು ಹಲವು ಬಾರಿ ಗೂಗಲ್ ಗೆ ಪ್ರಶ್ನೆ ಕೇಳಿದ್ದ.
ಹಲವು ಬಾರಿ ಗೂಗಲ್ ಗೆ 'ಸಾಯುವ ಸುಲಭ ಮಾರ್ಗ ಯಾವುದು'? ಎಂದು ಪ್ರಶ್ನೆ ಕೇಳಿದ್ದನಂತೆ. ಖುಷಿ ಖುಷಿಯಾಗಿ ಇರುತ್ತಿದ್ದ ಯುವಕ ಯಾವತ್ತೂ ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ ಯೋಚನೆ ಮಾಡುತ್ತಾನೆ ಅಂತ ಯಾರು ಕೂಡ ಅಂದು ಕೊಂಡಿರಲಿಲ್ವಂತೆ.
ಈತನ ಆತ್ಮಹತ್ಯೆಗೆ ಕಾರಣವಿರುವುದು ಇಷ್ಟೆ. ತಾನು ಪ್ರೀತಿಸುತ್ತಿದ್ದ ಹುಡುಗಿಗೆ ಎಂಗೇಜ್ ಮೆಂಟ್ ಆಗಿತ್ತು. ವಿಷಯ ತಿಳಿದ ಪವನ್
ಜೀತ್ ಕೊಹ್ಲಿಇದರಿಂದ ತುಂಬಾ ನೊಂದುಕೊಂಡಿದ್ದ ಕಡೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಕುರಿತು ನಿರ್ಧಾರ ತೆಗೆದುಕೊಂಡಿದ್ದರು
ಎನ್ನಲಾಗಿದೆ. ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿರುವ ಪೊಲೀಸರು ಪವನ್ ಎಂಬ ಯುವಕ ಖಿನ್ನತೆಯಿಂದ ಬಳಲುತ್ತಿದ್ದಎಂಬುದನ್ನು ಪತ್ತೆ
ಮಾಡಿದ್ದಾರೆ. ಪ್ರೇಯೆಸಿಯ ನಿಶ್ಚಿತಾರ್ಥ ವಿಷಯ ತಿಳಿದ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Comments