ಚೈನ್ನೈನಲ್ಲಿ ಶಂಕಿತ ಐಸಿಸ್ ಏಜೆಂಟ್ ಬಂಧನ
ಐಸಿಸ್ ಏಜೆಂಟ್ ನನ್ನು ರಾಜಸ್ಥಾನದ ಎಟಿಎಸ್ ತಂಡ ವಶಕ್ಕೆ ಪಡೆದಿದ್ದಾರೆ
ಚೆನ್ನೈ: ಚೆನ್ನೈನಲ್ಲಿ ಶಂಕಿತ ಐಸಿಸ್ ಏಜೆಂಟ್ ನನ್ನು ರಾಜಸ್ಥಾನದ ಎಟಿಎಸ್ ತಂಡ ಇವತ್ತು ಬೆಳಿಗ್ಗೆ ಚೆನ್ನೈನಲ್ಲಿ ಐಸಿಸ್ ಏಜೆಂಟ್ ನನ್ನು ವಶಕ್ಕೆ ಪಡೆದಿದ್ದಾರೆ.ಆತನ ಹೆಸರು ಹರೂನ್ ಎಂದು ಗುರುತಿಸಲಾಗಿದೆ. ಹರೂನ್ ಬರ್ಮಾ ಬಜಾರ್ ನಲ್ಲಿ ಸೆಲ್ ಫೋನ್ ಅಂಗಡಿ ಹೊಂದಿದ್ದ,ಈತ ಐಸಿಸ್ ಗೆ ಹಣ ಹಾಗೂ ನೇಮಕಾತಿ ಸಜ್ಜುಗೊಳಿಸುವ ಕೆಲಸ ಮಾಡುತ್ತಿದ್ದ ಮಾಹಿತಿಯಿಂದ ತಿಳಿದು ಬಂದಿದೆ.
ಮಾಹಿತಿ ಪ್ರಕಾರ ಐಸಿಸ್ ಏಜೆಂಟ್ ನನ್ನು ಎಟಿಎಸ್ ತಂಡ ಜಯಪೂರ್ ಕ್ಕೆ ಕರೆದುಕೊಂಡು ಹೋಗಿ, ವಿಚಾರಣೆ ನಡೆಸಲಿದ್ದಾರೆ. ಬಂಧಿತ ಐಸಿಸ್ ಏಜೆಂಟ್ ಹರೂನ್ ರಾಜಸ್ಥಾನದ ಕೆಲ ಕೃತ್ಯಗಳಲ್ಲಿ ಸಂಪರ್ಕ ಹೊಂದಿದ್ದಾನೆ ಎಂದು ಅನುಮಾನ ವ್ಯಕ್ತವಾಗಿದೆ.ಇದಕ್ಕೂ ಮುನ್ನ ಕೆಲ ದಿನದ ಹಿಂದೆ ಜಮೀಲ್ ಎಂಬ ಐಸಿಸ್ ಏಜೆಂಟ್ ನನ್ನು ಬಂಧಿಸಲಾಗಿತ್ತು. ಈತ ಸಹ ಐಸಿಸ್ ಪರವಾಗಿ ಫಡ್ಡಿಂಗ್ ಕೆಲಸ ಮಾಡುತ್ತಿದ್ದ.
Comments