ವಿದೇಶದಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ 15 ಲಕ್ಷ ವಂಚನೆ
ಶಿಮ್ಲಾ: ವಿದೇಶದಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಯುವತಿ ಯ ಹತ್ತಿರ ಯುವಕನೊಬ್ಬ 15 ಲಕ್ಷ ರೂ ವಂಚನೆ ಮಾಡಿರುವ ಪ್ರಕರಣಶಿಮ್ಲಾ ದಲ್ಲಿ ಬೆಳಕಿಗೆ ಬಂದಿದೆ. ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಯುವತಿಯನ್ನು ಯುವಕನೊಬ್ಬ ಯುಕೆಯಲ್ಲಿ ನೌಕರಿ ಕೊಡಿಸುವುದಾಗಿ ಹೇಳಿದ್ದ, ಇದನ್ನು ನಂಬಿದ ಯುವತಿ ಹಲ ಬ್ಯಾಂಕ್ ಅಕೌಂಟ್ ಗೆ ಹಣ ಹಾಕಿದ್ದಳು. ಆದರೆ ತಾನು ನೀಡಿರುವ ಹಣ ಹಾಗೂ ಕೆಲಸ ಸಿಗದೇ ಇದ್ದಾಗ ಅನುಮಾನಗೊಂಡ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಯುವತಿಯು ನೀಡಿದ ದೂರಿನ ಅನ್ವಯ ಮಾಹಿತಿ ಪಡೆದಿರುವ ಪೊಲಿಸರು ಆರೋಪಿವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಯುವತಿಗೆ ಕಳುಹಿಸಿದ್ದ ಇ -ಮೇಲ್ ನಲ್ಲಿ ಯುವಕ ಬ್ರಿಟನ್ ಮೂಲದವನೆಂದು ಹೇಳಿಕೊಂಡಿದ್ದನು ಎಂದು ಪೊಲೀಸರಿಗೆ ನೀಡಿರುವ ಮಾಹಿತಿಯಿಂದ ತಿಳಿದು ಬಂದಿದೆ.
Comments