ಉಗ್ರರ ಸಂಚು? ನಾಳೆಯಿಂದ ಅಮರನಾಥ ಯಾತ್ರೆ ಆರಂಭ
ಜಮ್ಮುಕಾಶ್ಮೀರ: ಗುರುವಾರದಿಂದ ಆರಂಭವಾಗಲಿರುವ ಅಮರನಾಥ ಯಾತ್ರೆ ಸಂದರ್ಭದಲ್ಲಿ ಪೊಲೀಸರು ಮತ್ತು ಯಾತ್ರಿಗಳ ಮೇಲೆ ದಾಳಿ ಮಾಡಲು ಉಗ್ರರು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿವೆ.
100 ರಿಂದ 150 ಯಾತ್ರಿಕರು ಮತ್ತು ಕನಿಷ್ಠ ನೂರು ಪೊಲೀಸರನ್ನು ಹತ್ಯೆ ಮಾಡುವಂತೆ ಸ್ಥಳೀಯ ಉಗ್ರಗಾಮಿಗಳಿಗೆ ಅವರ ಸಂಘಟನೆಯ ಮುಖ್ಯಸ್ಥರಿಂದ ಆದೇಶ ಬಂದಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ ಎಂದು ಕಾಶ್ಮೀರ ವಲಯದ ಐಜಿಪಿ ಮುನೀರ್ ಖಾನ್ ಅವರು ಸೇನೆಯ ಅಧಿಕಾರಿಗಳು, ಸಿಆರ್ ಪಿಎಫ್ ಹಾಗೂ ವಲಯ ಡಿಐಜಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
೪೦ ದಿನಗಳ ಅಮರನಾಥ ಯಾತ್ರೆ ಆರಂಭವಾಗಲಿದ್ದು, ಯಾತ್ರಿಕರ ರಕ್ಷಣೆಗಾಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ವಿಭಾಗೀಯ ಆಯುಕ್ತ ಮನದೀಪ್ ಭಂಡಾರಿ ಹೇಳಿದ್ದಾರೆ. ಪೊಲೀಸ್, ಬಿಎಸ್ ಎಫ್ , ಸೇನೆ ಮತ್ತು ಕೇಂದ್ರ ಮೀಸಲು ಪಡೆಯಯೋಧರು ಸೇರಿದಂತೆ ಸುಮಾರು 40 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ
Comments