ದೇಶಾದಾದ್ಯಂತ ಉಗ್ರರ ದಾಳಿ ಸಂಭವ,. ಗುಪ್ತಚರ ಇಲಾಖೆಯಿಂದ ಮಾಹಿತಿ
ನವ ದೆಹಲಿ: ದೇಶದ ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ದಾಳಿ ನಡೆಸುವ ಸಂಭವವಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಆದ ಕಾರಣ ಪ್ರಮುಖ ಸಿಟಿಗಳ ಜನಜಂಗುಳಿ ಪ್ರದೇಶಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.
ದೆಹಲಿ ಪೊಲೀಸರು ದೇಶದ ಎಲ್ಲಾ ಭದ್ರತಾ ದಳಗಳಿಗೂ ಸೂಚನೆ ನೀಡಿದ್ದು, ಬಸ್ ಸ್ಟೇಶನ್, ರೈಲ್ವೇ ಸ್ಟೇಷನ್ ಹಾಗೂ ಮೆಟ್ರೋ ಸ್ಟೇಷನ್, ಏರಪೋರ್ಟ್ ಸ್ಟೇಡಿಯಂ, ಮಾಲ್, ಪ್ರವಾಸಿ ತಾಣಗಳ ಮೇಲೆ ನಿಗಾ ಇಡಲಾಗಿದೆ. ಭಯೋತ್ಪಾದಕರ ದಾಳಿ ನಡೆಸುವ ಗುರಿ ದೇಹಲಿ ಅಷ್ಟೇ ಅಲ್ಲ, ಭಾರತದ ಇನ್ನುಳಿದ ಪ್ರಮುಖ ನಗರಗಳ ಮೇಲೂ ದಾಳಿ ನಡೆಯುವ ಸಂಭವವಿದೆ ಎನ್ನಲಾಗಿದೆ.
Comments